Sunday, November 27, 2022
Homeಇತರಆಂಬುಲೆನ್ಸ್ ನಲ್ಲೇ ಮದ್ಯ ಸಾಗಾಟ; ನಾಲ್ವರ ಬಂಧನ

ಆಂಬುಲೆನ್ಸ್ ನಲ್ಲೇ ಮದ್ಯ ಸಾಗಾಟ; ನಾಲ್ವರ ಬಂಧನ

- Advertisement -
- Advertisement -

ಚಿತ್ರದುರ್ಗ: ಲಾಕ್ ಡೌನ್ ಆದ್ದರಿಂದ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ. ಹೀಗಾಗಿ ಎಲ್ಲಾ ಬಾರ್ ಗಳು ಬಂದ್ ಆಗಿವೆ. ಈ ನಡುವೆ ಅಲ್ಲಲ್ಲಿ ಮದ್ಯವನ್ನು ಕಳ್ಳತನ ಮಾಡುತ್ತಿರುವ ಪ್ರಕರಣಗಳೂ ನಡೆಯುತ್ತಿವೆ. ಆದರೆ ಚಿತ್ರದುರ್ಗದಲ್ಲಿ ಸರ್ಕಾರಿ ಆಂಬುಲೆನ್ಸ್ ಅನ್ನೇ ಮದ್ಯ ಸಾಗಾಟಕ್ಕೆ ಬಳಸಿಕೊಂಡಿದ್ದಾರೆ.

ಆಂಬುಲೆನ್ಸ್ ನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ ಚಿತ್ರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನ ಹೊರಕೆದೇವಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ಆಂಬುಲೆನ್ಸ್ ನಲ್ಲಿ ಮದ್ಯ ತುಂಬಿಕೊಂಡು ಮಲ್ಲಾಡಿಹಳ್ಳಿ ಹತ್ತಿರ ಅದನ್ನು ಓಮ್ನಿ ಗಾಡಿಗೆ ಶಿಫ್ಟ್ ಮಾಡುವಾಗ ಚಿತ್ರಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಉಳ್ಳಾರ್ತಿ ಗ್ರಾಮದ ಎರಡು ಬಾರ್ ಗಳಿಂದ ಮದ್ಯವನ್ನು ಓಮಿನಿಯಲ್ಲಿ ಬೇರೆಡೆಗೆ ಮದ್ಯ ಸಾಗಿಸುತ್ತಿದ್ದರೆಂದು ತಿಳಿದುಬಂದಿದೆ. 90 ರೂ ಬೆಲೆಬಾಳುವ ಮದ್ಯದ ಪೌಚ್ ಗಳನ್ನು 500 ರೂಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

- Advertisement -
spot_img

Latest News

error: Content is protected !!