- Advertisement -
- Advertisement -
ಮಂಗಳೂರು, ಮೇ 5: ನಗರದ ವಿವಿಧೆಡೆ ಮಂಗಳವಾರ ಸಂಜೆಯ ವೇಳೆಗೆ ಸಾಧಾರಣ ಮಳೆಯಾಗಿದೆ. ಸಂಜೆ ಸುಮಾರು 5:45ರ ವೇಳೆಗೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿತು. ಅದರೊಂದಿಗೆ ಬಿರುಗಾಳಿ ಬೀಸುವುದರೊಂದಿಗೆ ಸಾಧಾರಣ ಮಳೆ ಸುರಿದಿದೆ.
ಕೂಳೂರಿನಲ್ಲಿ ಗಾಳಿ ಮಳೆಯಾದರೆ, ಬೈಕಂಪಾಡಿ ಪರಿಸರದಲ್ಲಿ ಬಿರುಗಾಳಿ ಬೀಸಿದೆ. ಬೋಳೂರು, ವೆಲೆನ್ಸಿಯಾ, ಮಂಗಳಾದೇವಿ, ಹಂಪನಕಟ್ಟೆಯಲ್ಲಿ ಕೂಡ ಮಳೆ ಹನಿಯಾಗಿದೆ. ಬಿಜೈ ಸುತ್ತಮುತ್ತಲಿನ ಪರಿಸರದಲ್ಲಿ ಬಿರಿಗಾಳಿ ಸಹಿತ ದಟ್ಟಮೋಡದ ವಾತಾವರಣ ಕಂಡು ಬಂತು.
- Advertisement -