ಭಾರತ ಲಾಕ್ಡೌನ್ ಹಿನ್ನೆಲೆಯಲ್ಲಿ ಹೊರಜಿಲ್ಲೆಗಳಿಂದ ಕೂಲಿ ಕೆಲಸವನ್ನು ಅರಸಿ ಸುಳ್ಯಕ್ಕೆ ಬಂದಿದ್ದ ಕೂಲಿಕಾರ್ಮಿಕರಿಗೆ ತಮ್ಮತಮ್ಮ ಊರುಗಳಿಗೆ ಹಿಂತಿರುಗುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರದ ವತಿಯಿಂದ ಇಂದು ನಡೆಯಿತು.
ಈ ಒಂದು ಕಾರ್ಯಕ್ರಮವು ಲಾಕ್ ಡೌನ್ ನಂತರ ಎರಡನೆಯ ಅಂತ ಆಗಿದ್ದು, ಕಳೆದ ಕೆಲವು ದಿನಗಳ ಹಿಂದೆ ಸುಮಾರು ಹತ್ತು ಬಸ್ಸುಗಳಲ್ಲಿ ಇನ್ನೂರಕ್ಕೂ ಹೆಚ್ಚು ಕೂಲಿಕಾರ್ಮಿಕರು ಉತ್ತರ ಕರ್ನಾಟಕ ಹಾಗೂ ಶಿವಮೊಗ್ಗ ಹಾವೇರಿ , ತುಮಕೂರು,ಮುಂತಾದ ಕಡೆಗಳಿಗೆ ಸುಳ್ಯದಿಂದ ಯಾತ್ರೆ ಯಾಗಿದ್ದರು. ಇಂದು ಎರಡನೆಯ ಹಂತದ ಯಾತ್ರಿಕರನ್ನು ಸುಳ್ಯದಿಂದ ಕಳುಹಿಸಲಾಗಿದ್ದು ಸುಮಾರು 180 ಕ್ಕೂ ಹೆಚ್ಚು ಕೂಲಿಕಾರ್ಮಿಕರು ಇಂದು ತಮ್ಮ ತಮ್ಮ ಊರಿಗೆ ಮರಳಿದರು.
ಜೀವರ್ಗಿ ,ಗದಗ್, ಶಿವಮೊಗ್ಗ ,ಬೆಂಗಳೂರು ,ಯಾದಗಿರಿ, ಮುಂತಾದ ಭಾಗಗಳಿಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಯಾತ್ರೆಗೆ ಇದ್ದರು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಅಂಗಾರ ಸುಳ್ಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಯಾತ್ರಿಕರಿಗೆ ಭೋಜನದ ಪ್ಯಾಕೆಟನ್ನು ಮತ್ತು ನೀರು, ಮಾಸ್ಕ್ ಗಳನ್ನು ವಿತರಿಸಿ ಯಾತ್ರೆಗೆ ಶುಭಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಸುಳ್ಯದ ಸುಮಾರು 800 ಕ್ಕೂ ಹೆಚ್ಚು ನಿವಾಸಿಗಳು ಬೆಂಗಳೂರಿನಲ್ಲಿ ಬಾಕಿಯಾಗಿದ್ದು ಅವರನ್ನು ಸುಳ್ಯಕ್ಕೆ ಕರೆತರುವ ವಿಚಾರವನ್ನು ಉಸ್ತುವಾರಿ ಸಚಿವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ಅವರನ್ನು ಸುಳ್ಯಕ್ಕೆ ಕರೆತರಲಾಗುವುದು ಎಂದು ಹೇಳಿದರು. ಕರೋನ ವೈರಸ್ ನ ವಿರುದ್ಧ ಹೋರಾಟದಲ್ಲಿ ಮುಖ್ಯ ಪಾತ್ರದಲ್ಲಿರುವ ವೈದ್ಯಕೀಯ ತಂಡ, ಪೊಲೀಸ್ ಇಲಾಖೆ, ಅಧಿಕಾರಿ ವರ್ಗದವರನ್ನು ,ಈ ಸಂದರ್ಭದಲ್ಲಿ ಅಭಿನಂದಿಸಿದರು.ಅದೇ ರೀತಿ ಸುಳ್ಯದಲ್ಲಿ ಉಳಿದುಕೊಂಡಿರುವ ಹೊರ ರಾಜ್ಯಗಳ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗಲು ಬಯಸುವವರನ್ನು ಕೂಡ ಕಳಿಸುವ ವ್ಯವಸ್ಥೆ ಶೀಘ್ರದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.