Thursday, July 18, 2024
Homeಕರಾವಳಿಸುಳ್ಯ;  ಮಧ್ಯರಾತ್ರಿ ಮೈನ್ ಸ್ವಿಚ್ ಆಫ್ ಮಾಡಿ ಮನೆಗೆ ನುಗ್ಗಿ  ಹಲ್ಲೆ ನಡೆಸಿ, ಜೀವ ಬೆದರಿಕೆ...

ಸುಳ್ಯ;  ಮಧ್ಯರಾತ್ರಿ ಮೈನ್ ಸ್ವಿಚ್ ಆಫ್ ಮಾಡಿ ಮನೆಗೆ ನುಗ್ಗಿ  ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಮುಸುಕುಧಾರಿಗಳು

spot_img
- Advertisement -
- Advertisement -

ಸುಳ್ಯ;  ಮಧ್ಯರಾತ್ರಿ ಮುಸುಕುಧಾರಿಗಳು ಮೈನ್ ಸ್ವಿಚ್ ಆಫ್ ಮಾಡಿ ಮನೆಗೆ ನುಗ್ಗಿ  ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಬೆಳ್ಳಾರೆ ಸಮೀಪದ ಕೊಳ್ತಿಗೆಯಲ್ಲಿ ನಡೆದಿದೆ.

ಸೆಪ್ಟೆಂಬರ್ 1 ರಂದು ಮಧ್ಯರಾತ್ರಿ ಚಿತ್ರಪ್ರಭ ಶೆಟ್ಟಿ ಎಂಬವರ ಮನೆಗೆ ಮಂಕಿ ಕ್ಯಾಪ್ ಹಾಗೂ ಕುತ್ತಿಗೆಗೆ ಶಾಲು ಹಾಕಿದ ನಾಲ್ಕರಿಂದ ಐದು ಮಂದಿ ಅಪರಿಚಿತ ವ್ಯಕ್ತಿಗಳು ಬಂದು ಮನೆಯ ಮೈನ್ ಸ್ವಿಚ್ ಆಫ್ ಮಾಡಿದ್ದಾರೆ. ಬಳಿಕ ಅವರ ಪತಿಯನ್ನು ಮನೆಯ ಒಳಗಿನಿಂದ ಹೊರಗೆ ಕರೆದು ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಇಲ್ಲಿಯೇ ಕೊಚ್ಚಿಹಾಕುವುದಾಗಿ ಬೆದರಿಸಿರುವುದಾಗಿ ಅವರು ಬೆಳ್ಳಾರೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು ಈಗಾಗಲೇ ಪೊಲೀಸ್ ಠಾಣೆಯಲ್ಲಿ ನೀಡಿದ ದೂರನ್ನು ಹಿಂಪಡೆಯಬೇಕು, ಇಲ್ಲದಿದ್ದಲ್ಲಿ ನಿಮ್ಮ ಇಡೀ ಕುಟುಂಬವನ್ನು ನಾಶಮಾಡುವುದಾಗಿ ಗದರಿಸಿ ಮನೆ ಬಾಗಿಲಿಗೆ ದೊಣ್ಣೆ, ಕಲ್ಲು, ಬಿಯರ್ ಬಾಟಲ್ ನಿಂದ ಬಡಿದು ಬೆದರಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ವೇಳೆ 112 ಸಹಾಯವಾಣಿಗೆ ಕರೆ ಮಾಡಿದ್ದು, ಈ ವಿಚಾರ ತಿಳಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.ಜಮೀನು ತಕರಾರಿಗೆ ಸಂಬಂಧಿಸಿ ತನಗೆ ಬೈದು ಬೆದರಿಕೆ ಒಡ್ಡಿದ್ದಾರೆ ಎಂದು ಚಿತ್ರಪ್ರಭ ತಿಳಿಸಿದ್ದಾರೆ.ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ 59/2023 ಕಲಂ : 447, 504, 506 ಜೊತೆಗೆ 149 ಐಪಿಸಿ. ಯಂತೆ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!