Friday, June 5, 2026
Homeಕರಾವಳಿಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯ ಕರಿಮಣಿ ಸರ ಕಳ್ಳತನ

ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯ ಕರಿಮಣಿ ಸರ ಕಳ್ಳತನ

- Advertisement -
- Advertisement -

ಸುಬ್ರಮಣ್ಯ ; ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯ ಕರಿಮಣಿ ಸರ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಕೊಡಗಿನಿಂದ ದೇಗುಲಕ್ಕೆ ಬಂದಿದ್ದ ಮಹಿಳೆಯ ತಾಳಿ ಸರವನ್ನು ಬಸ್‌ ಹತ್ತುವ ಸಂದರ್ಭದಲ್ಲಿ ಕಳ್ಳತನ ಮಾಡಲಾಗಿದೆ.

ಸೋಮವಾರಪೇಟೆ ನಿವಾಸಿ ಲೀಲಾ (55) ಸೆ. 3ರಂದು ಬೆಳಗ್ಗೆ ಕುಕ್ಕೆ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು, ಊರಿಗೆ ಹೋಗಲು ಮಧ್ಯಾಹ್ನ ಹಾಸನ-ಬೆಂಗಳೂರು ಬಸ್‌ಗೆ ಹತ್ತುವಾಗ ನೂಕು ನುಗ್ಗಲಿದ್ದು, ಸೀಟಿನಲ್ಲಿ ಕೂತು ನೋಡಿದಾಗ 25 ಗ್ರಾಂ ತೂಕದ 87,000 ರೂ.ಮೌಲ್ಯದ ಸರವನ್ನು ಕಳ್ಳತನವಾಗಿದೆ ಎಂದು ಅವರು  ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!