Thursday, June 4, 2026
Homeಇತರಕಿನ್ನಿಗೋಳಿ: ಐಕಳ ಪಂಚಾಯತ್ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ...!

ಕಿನ್ನಿಗೋಳಿ: ಐಕಳ ಪಂಚಾಯತ್ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ…!

- Advertisement -
- Advertisement -

ಕಿನ್ನಿಗೋಳಿ: ಕಾಡು ಬಿಟ್ಟು ಪ್ರಾಣಿಗಳು ನಾಡಿಗೆ ಧಾವಿಸುತ್ತಿರುವ ಪ್ರಕರಣಗಳು ಇತ್ತಿಚ್ಚೆಗೆ ಹೆಚ್ಚಾಗುತ್ತಿದೆ. ಮಂಗಳೂರಿನ ಕಿನ್ನಿಗೋಳಿ ಸಮೀಪದ ಐಕಳ ಪಂಚಾಯತ್ ಬಳಿಯ ಪಾಂಪೆ ಕಾಲೇಜು ಬಳಿ ಚಿರತೆ ಪ್ರತ್ಯೇಕ್ಷವಾದ ಘಟನೆ ವರದಿಯಾಗಿದೆ.

ಕಳೆದ ರಾತ್ರಿ ಸ್ಥಳೀಯರೋಬ್ಬರು ವಾಹನದ ಮೂಲಕ ಸಂಚರಿಸುವಾಗ ಚಿರತೆ ಮುಖ್ಯ ರಸ್ತೆಯಿಂದ ಒಳ ರಸ್ತೆಗೆ ಚಲಿಸುವುದನ್ನು ಗಮನಿಸಿ ಅವರು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಇನ್ನು ಚಿರತೆ ಸುದ್ದಿಯಿಂದ ಕಿನ್ನಿಗೋಳಿ ಪರಿಸರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

- Advertisement -

Latest News

error: Content is protected !!