ಬಿರುವೆರ್ ಕುಡ್ಲ ಸಂಸ್ಥೆಯಿಂದ ಲೇಡಿಗೋಷನ್ ಆಸ್ಪತ್ರೆಗೆ ಎಲ್ ಇಡಿ ಪರದೆ ಹಸ್ತಾಂತರ

ಮಂಗಳೂರು: ಇನ್ನು ಮುಂದೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಎಲ್ ಇಡಿ ಪರದೆ ಮೂಲಕ ಮಾಹಿತಿ ದೊರೆಯಲಿದೆ.

ಬಿರುವೆರ್ ಕುಡ್ಲ ಸಂಸ್ಥೆಯ ವತಿಯಿಂದ ಲೇಡಿಗೋಷನ್ ಆಸ್ಪತ್ರೆಗೆ ಎಲ್ಇಡಿ ಪರದೆಯನ್ನು ಹಸ್ತಾಂತರಿಸಲಾಗಿದೆ.

ಎಲ್ಇಡಿ ಪರದೆಯ ಮೂಲಕ ಆಸ್ಪತ್ರೆಗೆ ಆಗಮಿಸುವವರಿಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶದಿಂದ ಎಲ್ ಇಡಿ ಪರದೆ ಅಳವಡಿಸಲಾಗಿದೆ.

ಇಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಸ್ಪತ್ರೆಗೆ ಎಲ್ ಇಡಿ ಪರದೆ ಹಸ್ತಾಂತರಿಸಿದರು. ಬಿರುವೆರ್ ಕುಡ್ಲ ಸಂಸ್ಥೆಯ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.