ಕಡಬ; ರಾಮಕುಂಜದ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರೊಬ್ಬರು ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಗಾಯಗೊಂಡ ವಿದ್ಯಾರ್ಥಿ ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನವೆಂಬರ್ 20 ರಂದು ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿ ಕವನ್ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿ.
ರಾಮಕುಂಜ ಖಾಸಗಿ ಕಾಲೇಜಿಗೆ ವಿದ್ಯಾರ್ಥಿಗಳಿಬ್ಬರು ಬೈಕನ್ನು ತಂದಿದ್ದರ. ಇದೇ ಈ ವಿಚಾರಕ್ಕೆ ಉಂಟಾದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೈಕ್ ವಿಚಾರ ಪ್ರಶ್ನೆ ಮಾಡಿದ ಉಪನ್ಯಾಸಕ ಬುಧವಾರ ಮುಂಜಾನೆ ವೇಳೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. ವಿದ್ಯಾರ್ಥಿ ಹೇಳಿಕೆ ನೀಡಿರುವ ಪ್ರಕಾರ ಎಂಟು ವಿದ್ಯಾರ್ಥಿಗಳಿಗೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. ಕಡಬ ಪೊಲೀಸರು ತಡರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳುವ ಸಂದರ್ಭದಲ್ಲಿಯೂ ಉಪನ್ಯಾಸಕ ಆಸ್ಪತ್ರೆಯಲ್ಲಿದ್ದರು ಎನ್ನಲಾಗಿದೆ. ಆಗ, ಸ್ಥಳದಲ್ಲಿದ್ದ ಯುವಕರ ಗುಂಪು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕೆಲ ಹೊತ್ತು ವಾಗ್ವಾದ ನಡೆದಿದೆ ಎನ್ನಲಾಗಿದೆ.