Friday, June 5, 2026
Homeಕರಾವಳಿಅರಳ ಗ್ರಾ.ಪಂ‌.ಯ ಕುಟ್ಟಿಕಳದಿಂದ ಕಲ್ಲೇರಿ ಸಂಪರ್ಕ ರಸ್ತೆ ಕಾಮಗಾರಿಗೆ ಶಾಸಕರಿಂದ ಶಿಲಾನ್ಯಾಸ

ಅರಳ ಗ್ರಾ.ಪಂ‌.ಯ ಕುಟ್ಟಿಕಳದಿಂದ ಕಲ್ಲೇರಿ ಸಂಪರ್ಕ ರಸ್ತೆ ಕಾಮಗಾರಿಗೆ ಶಾಸಕರಿಂದ ಶಿಲಾನ್ಯಾಸ

- Advertisement -
- Advertisement -

ಬಂಟ್ವಾಳ: 2.20 ಕೋಟಿ ವೆಚ್ಚದಲ್ಲಿ ಅರಳ ಗ್ರಾ.ಪಂ‌.ವ್ಯಾಪ್ತಿಯ ಕುಟ್ಟಿಕಳದಿಂದ ಕಲ್ಲೇರಿ ಸಂಪರ್ಕ ರಸ್ತೆ ಕಾಮಗಾರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು ಅರಳ ಗ್ರಾ.ಪಂ.ವ್ಯಾಪ್ತಿಯಲ್ಲಿ ಈಗಾಗಲೇ 13 ಕೋಟಿಗಿಂತಲೂ ಅಧಿಕ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅಧಿಕ ಕಾಮಗಾರಿಗಳನ್ನು ಮಾಡುವುದಾಗಿ ಭರವಸೆ ನೀಡಿದರು. ಮುಂದಿನ ನಾಲ್ಕು ತಿಂಗಳೊಳಗೆ ಕಾಮಗಾರಿ ಮುಗಿಸಿ ಜನರ ಉಪಯೋಗಕ್ಕೆ ಲಭ್ಯವಾಗುವಂತೆ ಮಾಡಲಾಗುವುದು ಎಂದರು.

ಈ ವೇಳೆ ಅಧ್ಯಕ್ಷ ಲಕ್ಮೀದರ ಶೆಟ್ಟಿ, ಉಪಾಧ್ಯಕ್ಷೆ ಪ್ರೇಮ,ಸದಸ್ಯರಾದ ನಳಿನಿ, ಪ್ರಸನ್ನಕುಮಾರ್ ಶೆಟ್ಟಿ,ದೇವಕಿ, ದೇಜಪ್ಪ ಪೂಜಾರಿ ಚಂದ್ರಹಾಸ ಪೂಜಾರಿ , ಒಳಚರಂಡಿ ಮಂಡಳಿ  ಸುಲೋಚನ ಜಿ.ಕೆ.ಭಟ್, ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ಡೊಂಬಯ್ಯ ಅರಳ,  ಪ್ರಮುಖ ರಾದ ರಂಜನ್ ಕುಮಾರ್ ಶೆಟ್ಟಿ,  ರವಿ ಅರಸ, ಚಂದ್ರಶೇಖರ್ ಶೆಟ್ಟಿ, ಸುಕುಮಾರ್, ಉಮೇಶ್ ಡಿ.ಎಮ್ ಅರಳ, ಸುದರ್ಶನ ಬಜ, ಪುರುಷೋತ್ತಮ ಶೆಟ್ಟಿ, ರಮನಾಥ ರಾಯಿ, ಕಾರ್ತಿಕ್ ಬಲ್ಲಾಳ್,  ಪಿ.ಡಿ.ಒ ಧರ್ಮರಾಜ್ ಗುತ್ತಿಗೆ ದಾರ ನಜೀರ್ ಕೋಣಾಜೆ ಉಪಸ್ಥಿತರಿದ್ದರು.

- Advertisement -

Latest News

error: Content is protected !!