- Advertisement -
![]()
- Advertisement -
ಬಂಟ್ವಾಳ; ಮಾಣಿಗುತ್ತು ಶ್ರೀ ಉಳ್ಳಾಲ್ತಿ ಬೆಮ್ಮೆರ್- ಗುಡ್ಡೆಚಾಮುಂಡಿ ಪಂಜುರ್ಲಿ -ಮಲೆಕೊರತಿ ದೈವಗಳ ನೂತನ ಚಿತ್ತರಿಗೆಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.
ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ ವೃಷಭ ಮಾಸ 10 ಸಲುವ ತಾ 25.05.2023ನೇ ಗುರುವಾರ ದಿವಾ ಗಂಟೆ 08-02ರಿಂದ 08-58ರ ಒಳಗೆ ನಡೆಯುವ ಮಿಥುನ ಲಗ್ನದಲ್ಲಿ ಮಾಣಿಗುತ್ತು ಶ್ರೀ ಉಳ್ಳಾಲ್ತಿ ಬೆಮ್ಮೆರ್- ಗುಡ್ಡೆಚಾಮುಂಡಿ ಪಂಜುರ್ಲಿ -ಮಲೆಕೊರತಿ ದೈವಗಳ ನೂತನ ಚಿತ್ತರಿಗೆಯ ಶಿಲಾನ್ಯಾಸ ಕಾರ್ಯಕ್ರಮ ಗತ ಕಾಲದ ವೈಭವದಂತೆ ಪುನಃರ್ನಿರ್ಮಾಣಗೊಳ್ಳುವ ಸಂಕಲ್ಪದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.

ಶ್ರೀ ದೈವಗಳ ಸಾನ್ನಿದ್ಯ ಅಭಿವೃದ್ಧಿಗಾಗಿ,ಗ್ರಾಮದ ಅಭಿವೃದ್ಧಿಗಾಗಿ ಆಗುವ ಈ ಪುಣ್ಯಕಾರ್ಯದಲ್ಲಿ ಗ್ರಾಮಸ್ಥರು, ಭಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಭಾಗಿಗಳಾಗಬೇಕಾಗಿ ವಿನಂತಿಸಲಾಗಿದೆ.
- Advertisement -


