Thursday, June 4, 2026
Homeತಾಜಾ ಸುದ್ದಿಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ: ರಸ್ತೆಗೆ ಉರುಳಿದ ಕಲ್ಲು, ಬಂಡೆಗಳು

ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ: ರಸ್ತೆಗೆ ಉರುಳಿದ ಕಲ್ಲು, ಬಂಡೆಗಳು

- Advertisement -
- Advertisement -

ಚಿಕ್ಕಮಗಳೂರು : ಕಳೆದೆರೆಡು ದಿನಗಳಿಂದ ಆಗಾಗ್ಗೆ  ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನ 8 ಹಾಗೂ 9 ನೇ ತಿರುವಿನಲ್ಲಿ ಸಣ್ಣ ಪ್ರಮಾಣದ ಭೂ ಕುಸಿತ ಉಂಟಾಗಿದೆ. ಪರಿಣಾಮ ಬಂಡೆಗಳು ಹಾಗೂ ಮಣ್ಣು ಮಳೆ ನೀರಿನ ಜೊತೆಗೆ ರಸ್ತೆಗೆ ತೇಲಿ ಬರುತ್ತಿವೆ. ಮಳೆಯಿಂದಾಗಿ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು ಘಾಟ್ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನು ಭೂ ಕುಸಿತದ ಸ್ಥಳಕ್ಕೆ  ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!