Friday, June 5, 2026
Homeಕರಾವಳಿನಿರಂತರ ಮಳೆಯಿಂದಾಗಿ ಪೆರ್ಮಂಕಿಯಲ್ಲಿ ಭೂಕುಸಿತ; ಮನೆ, ತೋಟಗಳಿಗೆ ಹಾನಿ

ನಿರಂತರ ಮಳೆಯಿಂದಾಗಿ ಪೆರ್ಮಂಕಿಯಲ್ಲಿ ಭೂಕುಸಿತ; ಮನೆ, ತೋಟಗಳಿಗೆ ಹಾನಿ

- Advertisement -
- Advertisement -

ಮಂಗಳೂರು: ಉಳಾಯಿಬೆಟ್ಟು ಮತ್ತು ಪೆರ್ಮಾಯಿ ಚರ್ಚ್ ಅನ್ನು ಸಂಪರ್ಕಿಸುವ ಟಾರ್‌ ರಸ್ತೆಯಲ್ಲಿ ಬೃಹತ್ ಭೂಕುಸಿತ ಸಂಭವಿಸಿದೆ.

ಈ ಹಿನ್ನೆಲೆಯಲ್ಲಿ ಈ ಪ್ರದೇಶದ ನಿವಾಸಿಗಳು ಮಂಗಳೂರು ತಲುಪಲು ಮಲ್ಲೂರು ಮೂಲಕ ಮಾರ್ಗವನ್ನು ಬಳಸುವಂತಾಗಿದೆ. ರಸ್ತೆಯ ಸುಮಾರು ನಾಲ್ಕು ಅಡಿಗಳಷ್ಟು ಭಾಗ ಕುಸಿದಿದ್ದು, ಒಂದು ಕಿಲೋಮೀಟರ್ ಉದ್ದದ ಮಣ್ಣು ಕುಸಿದು ಮನೆಗಳು ಮತ್ತು ತೋಟಗಳಿಗೆ ಹಾನಿಯಾಗಿದೆ.

ಭೂಕುಸಿತದಿಂದಾಗಿ ಪೆರ್ಮಂಕಿ ಪದವಿಯಿಂದ ಪಾಲಿಕಟ್ಟೆ ಮತ್ತು ಮಲ್ಲೂರು ಉದ್ದಬೆಟ್ಟುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದಿದ್ದು, ನೂರಾರು ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಇದರ ಪರಿಣಾಮವಾಗಿ ಪರ್ಯಾಯ ಮಾರ್ಗಗಳನ್ನು ಬಳಸಬೇಕಾದ ಪರಿಸ್ಥಿತಿ ಉಂಟಾಗಿದೆ. 

ಸ್ಥಳಕ್ಕೆ ಭೇಟಿ ನೀಡಿರುವ ಉಳಾಯಿಬೆಟ್ಟು ಪಿಡಿಒ ಅನಿತಾ ಕಾತ್ಯಾಯನಿ, ಈಗಾಗಲೇ ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಮಳೆ ಮುಂದುವರಿದರೆ ಪರಿಹಾರ ಕಾರ್ಯ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಜಿಲ್ಲಾಡಳಿತವೇ ಇದರ ಕಾರ್ಯಾಚರಣೆಯನ್ನು ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ. 

- Advertisement -

Latest News

error: Content is protected !!