Wednesday, July 15, 2026
Homeಕರಾವಳಿಮಂಗಳೂರುಪುತ್ತೂರು: ಬೆಳಗ್ಗಿನ ಜಾವ ಹೆದ್ದಾರಿ ಮೇಲೆ ಕುಸಿದ ಮಣ್ಣು

ಪುತ್ತೂರು: ಬೆಳಗ್ಗಿನ ಜಾವ ಹೆದ್ದಾರಿ ಮೇಲೆ ಕುಸಿದ ಮಣ್ಣು

- Advertisement -
- Advertisement -

ಪುತ್ತೂರು: ಹೆದ್ದಾರಿ ಮೇಲೆ ಮಣ್ಣು ಕುಸಿದು ವಾಹನ ಸಂಚಾರ ಬಂದ್ ಆಗಿರುವ ಘಟನೆ ಪುತ್ತೂರಿನಲ್ಲಿ ಸಂಭವಿಸಿದೆ.

ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲ ಎಂಬಲ್ಲಿ ಇಂದು ಬೆಳಗಿನ ಜಾವ ಗುಡ್ಡ ಕುಸಿದು ಮಾಣಿ-ಮೈಸೂರು ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ.

ಹೆದ್ದಾರಿಗೆ ಮಣ್ಣು ಬಿದ್ದು ರಸ್ತೆ ಸಂಪರ್ಕ ಕಡಿತವಾಗಿರುವ ಕಾರಣ ಸುಳ್ಯ, ಮಡಿಕೇರಿ, ಮೈಸೂರು ಕಡೆಗೆ ಪ್ರಯಾಣಿಸುವವರಿಗೆ ಪುತ್ತೂರು ನಗರದ ಮೂಲಕ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಳಗಿನ ಜಾವ ವಾಹನ ಸಂಚಾರ ಇಲ್ಲದಿದ್ದ ಸಮಯದಲ್ಲಿ ಮಣ್ಣು ಕುಸಿದು ಬಿದ್ದಿದ್ದು, ಸಂಭಾವ್ಯ ಅನಾಹುತ ತಪ್ಪಿದಂತಾಗಿದ್ದು, ಮಣ್ಣು ತೆರವು ಕಾರ್ಯ ನಡೆದಿದೆ.

- Advertisement -

Latest News

error: Content is protected !!