Wednesday, May 1, 2024
Homeಆರಾಧನಾಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಓಡದಕರಿಯ ಲಾಯಿಲ ವರ್ಷವಾದಿ ಜಾತ್ರಾ ಮಹೋತ್ಸವ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಓಡದಕರಿಯ ಲಾಯಿಲ ವರ್ಷವಾದಿ ಜಾತ್ರಾ ಮಹೋತ್ಸವ

spot_img
- Advertisement -
- Advertisement -

ಬೆಳ್ತಂಗಡಿ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಓಡದಕರಿಯ ಲಾಯಿಲ ಬೆಳ್ತಂಗಡಿ ಇಲ್ಲಿನ ವರ್ಷವಾದಿ ಜಾತ್ರಾ ಮಹೋತ್ಸವ ಎಪ್ರಿಲ್ 27, 28 ರಂದು ಶ್ರೀ ಎಸ್.ಗೋಪಾಲಕೃಷ್ಣ ಉಪಾಧ್ಯಾಯ ಅಸ್ರಣ್ಣರು ಇಂದಬೆಟ್ಟು- ಕುತ್ರೊಟ್ಟು ಇವರ ನೇತೃತ್ವದಲ್ಲಿ ವೇದಮೂರ್ತಿ ಶ್ರೀ ಶ್ರೀ ಕಾಂತ ಭಟ್ ಬೆಳುವಾಯಿ ಇವರ ಪೌರೋಹಿತ್ಯದಲ್ಲಿ ನಡೆಯಲಿದೆ.

ಎಪ್ರಿಲ್ 27 ಶನಿವಾರ – ದೇವತಾ ಪ್ರಾರ್ಥನೆ, ತೋರಣ ಮುಹೂರ್ತ 12 ತೆಂಗಿನ ಕಾಯಿ ಗಣಹೋಮ, ನವಕ ಪ್ರಧಾನ ಹೋಮ ಹಾಗೂ ಕಲಶ ಅಭೀಷೇಕ , ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ.ಸಂಜೆ ನಾಗ ಸಾನಿಧ್ಯದಲ್ಲಿ ಆಶ್ಲೇಷಾ ಬಲಿ , ನಿತ್ಯ ಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರಗಲಿದೆ.

ಎಪ್ರಿಲ್ 28 ಭಾನುವಾರ – ಪಂಚಾಮೃತ ಅಭಿಷೇಕ,ನಾಗ-ನಾಗಬ್ರಹ್ಮ ಸಾನಿಧ್ಯದಲ್ಲಿ ತಂಬಿಲ,ಅಶ್ವಥ ಪೂಜೆ , ಚಂಡಿಕಾ ಹೋಮ, ಮಹಾ ಪೂಜೆ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ.

ಸಂಜೆ.06.30 ರಿಂದ ಶ್ರೀ ಬಲಮುರಿ ಗಣಪತಿ ಭಜನಾ ಮಂಡಳಿ ಲಾಯಿಲ ಇವರಿಂದ ಕುಣಿತ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

07.30 ರಂಗ ಪೂಜೆ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ರಾತ್ರಿ 09.00 ರಿಂದ ಮೈಸಂದಾಯ , ಲೇಕೆಸಿರಿ , ಜುಮಾದಿ ಬಂಟ, ಅಣ್ಣಪ್ಪ ಪಂಜುರ್ಲಿ ದೈವಗಳಿಗೆ ನೇಮೋತ್ಸವ ನಡೆಯಲಿದೆ.ಭಕ್ತಾಧಿಗಳು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಕೈಂಕರ್ಯದಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಳದ ಪ್ರಕಟಣೆ ತಿಳಿಸಿದೆ.

- Advertisement -
spot_img

Latest News

error: Content is protected !!