Thursday, January 16, 2025
Homeಕರಾವಳಿಬೆಳ್ತಂಗಡಿ : ಲಾಯಿಲ ಶಾಲೆಯ ಮುಂಭಾಗದಲ್ಲಿ ಕೈಗಾರಿಕಾ ಉದ್ಯಮ; ವುಡ್ ಫರ್ನಿಚರ್ಸ್ ಸ್ಥಳಾಂತರಕ್ಕೆ ಗ್ರಾ.ಪಂ ನೋಟಿಸ್

ಬೆಳ್ತಂಗಡಿ : ಲಾಯಿಲ ಶಾಲೆಯ ಮುಂಭಾಗದಲ್ಲಿ ಕೈಗಾರಿಕಾ ಉದ್ಯಮ; ವುಡ್ ಫರ್ನಿಚರ್ಸ್ ಸ್ಥಳಾಂತರಕ್ಕೆ ಗ್ರಾ.ಪಂ ನೋಟಿಸ್

spot_img
- Advertisement -
- Advertisement -

ಬೆಳ್ತಂಗಡಿ : ಶಾಲೆಯ ಮುಂಭಾಗದಲ್ಲಿ ಕೈಗಾರಿಕಾ ಉದ್ಯಮ ನಡೆಸುತ್ತಿರುವುದರಿಂದ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟಾಗುವುದರಿಂದ ಫಾರ್ನಿಚರ್ಸ್ ಶಾಪ್ ಸ್ಥಳಾಂತರಿಸಲು ಲಾಯಿಲ ಗ್ರಾಮ ಪಂಚಾಯತ್ ನೋಟಿಸ್ ಜಾರಿ ಮಾಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಲಾಯಿಲ ಕರ್ನೊಡಿ ಸರಕಾರಿ ಶಾಲೆಯಲ್ಲಿ 1 ರಿಂದ 8 ನೇ ತರಗತಿವರೆಗೆ 93 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು. ಶಾಲೆಯ 100 ಮೀಟರ್ ಅಂತರದಲ್ಲಿ ಶ್ರೀ ದೇವಿ ಫರ್ನಿಚರ್ಸ್ ಎಂಬ ಮರದ ಕೈಗಾರಿಕಾ ಉದ್ಯಮ ನಡೆಸುತ್ತಿದ್ದು. ಇದರಿಂದ ಶಾಲೆಯಲ್ಲಿ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟಾಗುವುದರಿಂದ ಈ ಕೈಗಾರಿಕಾ ಉದ್ಯಮದ ಪರವಾನಿಗೆ ರದ್ದು ಮಾಡಲು ಲಾಯಿಲ ನಿವಾಸಿ ಅನ್ಸರ್ ಎಂಬವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಲಾಯಿಲ ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದರು.

ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ತಕ್ಷಣ ಅನುಮತಿ ಪತ್ರ ರದ್ದು ಮಾಡಿ ಕೈಗಾರಿಕಾ ಉದ್ಯಮವನ್ನು ಸ್ಥಳಾಂತರಿಸಲು ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಲೀಕ ಶ್ರೀಧರ ಅಚಾರ್ಯಗೆ ನ.19 ರಂದು ನೋಟಿಸ್ ಜಾರಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!