Thursday, May 2, 2024
Homeಕರಾವಳಿಬೆಳ್ತಂಗಡಿ : ಲಾಯಿಲ ಬಿಜೆಪಿ ಮುಖಂಡ ರಾಜೀನಾಮೆ : ರಾಜೀನಾಮೆ ಪತ್ರದಲ್ಲಿ ಹಲವು ವಿಚಾರ ಉಲ್ಲೇಖ.

ಬೆಳ್ತಂಗಡಿ : ಲಾಯಿಲ ಬಿಜೆಪಿ ಮುಖಂಡ ರಾಜೀನಾಮೆ : ರಾಜೀನಾಮೆ ಪತ್ರದಲ್ಲಿ ಹಲವು ವಿಚಾರ ಉಲ್ಲೇಖ.

spot_img
- Advertisement -
- Advertisement -

ಬೆಳ್ತಂಗಡಿ; ತಾಲೂಕಿನ ಲಾಯಿಲ ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸ್ಥಾನ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸುಧಾಕರ್.ಬಿ.ಎಲ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರದ ಪ್ರತಿ ಮಹಾ ಎಕ್ಸ್‌ಪ್ರೆಸ್‌ ವೆಬ್ ಸೈಟ್ ನ್ಯೂಸ್ ಗೆ ಲಭ್ಯವಾಗಿದೆ.

ರಾಜೀನಾಮೆ ‌ಪತ್ರದಲ್ಲಿ ಏನಿದೆ?

ಕಳೆದ 33 ವರ್ಷಗಳಿಂದ ನಾನು ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಈ ಮಧ್ಯೆ ಬೂತ್ ಪ್ರಮುಖವಾಗಿ ಗ್ರಾಮ ಸಮೀತಿಯ ಅಧ್ಯಕ್ಷನಾಗಿ, ತಾಲೂಕು ಹಿಂದುಳಿದ ವರ್ಗ ಮೋರ್ಚಾದ ಪ್ರ.ಕಾರ್ಯದರ್ಶಿಯಾಗಿ ಪಕ್ಷ ನೀಡಿದ ಜವಬ್ದಾರಿತ ಸ್ತರಗಳಲ್ಲಿ , ಸ್ವಹಿತಾಸಕ್ತಿ ಬಿಟ್ಟು ಸಂಘಟನೆಗೆ ದುಡಿದಿರುತ್ತೇನೆ. ಅಲ್ಲದೆ ಯಾವುದೇ ಅಪೇಕ್ಷೆ ಪಡದಿದ್ದರೂ ,ಪಕ್ಷ ಸೂಚಿಸಿದಾಗ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರು ಭಾರಿ ಗ್ರಾಮ ಪಂಚಾಯತ್ ಸದಸ್ಯನಾಗಿ, ಅಧ್ಯಕ್ಷನಾಗಿ, ತಾಲೂಕು ಪಂಚಾಯತ್ ಸದಸ್ಯನಾಗಿ ಜನರ ಸೇವೆ ಮಾಡುವಲ್ಲಿ ಪಕ್ಷ ನನಗೆ ಅವಕಾಶವನ್ನು ಕೂಡ ಕಲ್ಪಿಸಿಕೊಟ್ಟಿದೆ, ಅದಕ್ಕಾಗಿ ಮತ್ತು ನನ್ನನ್ನು ರಾಜಕೀಯವಾಗಿ ಬೆಳೆಸಿದ ಗ್ರಾಮ ಹಾಗೂ ತಾಲೂಕಿನ ನಾಯಕರಿಗೆ ಮತ್ತು ನಾನು ಪಕ್ಷಕ್ಕೆ ಆಭಾರಿಯಾಗಿದ್ದೇನೆ.


ಪ್ರಸ್ತುತ ನಾನು ಲಾಯಿಲ ಶಕ್ತಿ ಕೇಂದ್ರ ಪ್ರಮುಖನಾಗಿ ಪಕ್ಷ ನೀಡಿದ ಜವಾಬ್ದಾರಿಯನ್ನು ನನ್ನ ಸ್ವಂತ ಜೀವನದ ಹಿತಾಸಕ್ತಿ ಬಿಟ್ಟು ನಿರ್ವಹಿಸುತ್ತಿದ್ದೇನೆ. ಪಕ್ಷದ ರ್ಯಾಲಿಗಳು, ಸಭೆಗಳು, ಪ್ರತಿಭಟನೆಗಳು, ಸಂಘಟನಾತ್ಮಕ ಯಾವುದೇ, ಕಾರ್ಯಕ್ರಮ ಅದು ತಾಲೂಕಿನಲ್ಲಿರಲಿ ಅಥವಾ ಮಂಗಳೂರಿನಲ್ಲಿ ನಡೆಯಲಿ ನನ್ನ ಜೀವನಕ್ಕಿರುವ ಒಂದು ಸಣ್ಣ ಅಂಗಡಿಯನ್ನು ಬಂದ್ ಮಾಡಿ ಕಾರ್ಯಕರ್ತರ ಜತೆ ಸೇರಿ ಭಾಗವಹಿಸುತ್ತಿದ್ದೆ. ಅಲ್ಲದೆ ಪ್ರತಿ ಚುನಾವಣೆಯಲ್ಲಿ ಕೊಟ್ಟಂತಹ ಜವಾಬ್ದಾರಿಯನ್ನು ಕಾಯ ವಾಚ ಮನಸ ಪಾಲಿಸಿದ್ದೇನೆ. 

ಆದರೆ ಇತ್ತಿಚೆಗೆ ನಮ್ಮ ಗ್ರಾಮದೊಳಗೆ ನಡೆಯುವ ಕೆಲವೊಂದು ವಿಚಾರದಲ್ಲಿ ಶಕ್ತಿ ಕೇಂದ್ರದ ಗಮನಕ್ಕೂ ತಾರದೆ ಕೈಗೊಳ್ಳುತ್ತಿರುವ ಘಟಕಗಳ ಬಗ್ಗೆ ಪಕ್ಷದ ಶಾಸಕರ ಶ್ರಮಿಕ ಕಛೇರಿ ಮತ್ತು ಶಾಸಕ ನಡವಳಿಕೆಯಿಂದ ಮನಸ್ಸಿಗೆ ತುಂಬಾ ಹಿಂಸೆಯಾಗುತ್ತಿದೆ.  ತಮ್ಮ ಸ್ವಹಿತಾಸಕ್ತಿಯನ್ನು ಬಿಟ್ಟು , ಸ್ವಂತ ಜೀವನದ ಬಗ್ಗೆ ಕೂಡ ಯೋಚಿಸಿದೆ ಪ್ರತಿ ಸಂದರ್ಭದಲ್ಲಿ ಕೂಡ ಪಕ್ಷದ ಜತೆ ನಿಲ್ಲುವವರಿಗೂ ಒಂದೇ ಸಹಕಾರ , ಯಾವುದೇ ಸಂದರ್ಭದಲ್ಲಿ ಕೂಡ ಪಕ್ಷದ ಜತೆ ನಿಲ್ಲದೆ, ವಿರೋಧಿಸುತ್ತಾ ವಿರೋಧಿಗಳೊಂದಿಗೆ ಕೈಜೋಡಿಸಿ ಪಕ್ಷದ ಹಿನ್ನಡೆಗೆ ಕಾರಣವಾಗುತ್ತಾ , ಪಕ್ಷಕ್ಕೆ ಮುಜುಗರ ತರುತ್ತಾ , ಸಾರ್ವಜನಿಕವಾಗಿ ಪಕ್ಷಕ್ಕೆ, ಮತ್ತು ಪಕ್ಷದ ನಾಯಕರುಗಳಿಗೆ ಬೈಯುತ್ತಾ , ಪಕ್ಷದ ಯಾವುದೇ ಕಾರ್ಯಕ್ರಮವಾಗಲಿ , ಪಕ್ಷದಿಂದ ನಡೆಯುವ ಪ್ರತಿಭಟನೆಯಾಗಲಿ , ಸಮಾವೇಶವಾಗಲಿ ಯಾವುದಕ್ಕೂ ಬಾರದೆ ದೂರ ನಿಲ್ಲುತ್ತಾ ಸಂಘಟನೆಗೆ ಸಹಕರಿಸದವರಿಗೂ ಕೂಡ ಒಂದೇ ರೀತಿಯ ಸಹಕಾರ ಎಂದಾದರೆ , ಅಂತಹ ನಡವಳಿಕೆ ಮತ್ತು ಆಲೋಚನೆ ನನಗೆ ಬೇಸರ ತರಿಸಿದೆ. ಅದ್ದರಿಂದ ಈ ರೀತಿಯ ಬೆಳವಣಿಯಿಂದ ನನಗೆ ಮುಜುಗರ ಮಾತ್ರವಲ್ಲದೆ ,ತುಂಬಾ ಬೇಸರವಾಗಿರುತ್ತದೆ, ಅದ್ದರಿಂದ ನನಗೆ ಜವಾಬ್ದಾರಿಯುತ ಸ್ಥಾನದಲ್ಲಿ ಮುಂದುವರೆಯಲು ಇಷ್ಟವಿಲ್ಲ. ಆದ್ದರಿಂದ ನಾನು ಪಕ್ಷವಹಿಸಿರುವ ಶಕ್ತಿ ಕೇಂದ್ರ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ.

ಅಲ್ಲದೆ ಇನ್ನೂ ಮುಂದೆ ಪಕ್ಷ, ರಾಜಕೀಯದಲ್ಲೂ ಕೂಡ ಮುಂದುವರಿಯುವ ಆಸೆ ಇಲ್ಲದಿರುವುದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಈ ರಾಜೀನಾಮೆಯನ್ನು ಅಂಗೀಕರಿಸಬೇಕಾಗಿ ವಿನಂತಿ. ನನ್ನ ಜವಾಬ್ದಾರಿತ ಸಂದರ್ಭಗಳಲ್ಲಿ ಸಹಕಾರಿ ನೀಡಿರುವ ಪಕ್ಷದ ಅಧ್ಯಕ್ಷರುಗಳಿಗೆ ಪಕ್ಷದ ವಿವಿಧ ಸ್ಥರದ  ಎಲ್ಲಾ ಮುಖಂಡರಿಗೆ , ನಮ್ಮ ಗ್ರಾಮದ ಪ್ರಮುಖರಿಗೆ , ಬೂತಿನ ಪ್ರಮುಖರಿಗೆ , ಕಾರ್ಯಕರ್ತ ಬಂಧುಗಳಿಗೆ, ಶಾಸಕರುಗಳಿಗೆ ತುಂಬು ಹೃದಯದ ಧನ್ಯವಾದಗಳು. ಇನ್ನೂ ಮುಂದೆ ನಾನು ಸ್ವತಂತ್ರನಾಗಿದ್ದು ಭಾರತೀಯ ಜನತಾ ಪಾರ್ಟಿಗೂ ನನಗೂ ಯಾವುದೇ ಸಂಬಂಧವಿರುದಿಲ್ಲ ಎಂದಿರುವ ಅವರು  ರಾಜೀನಾಮೆ ಪತ್ರವನ್ನು ಬರೆದು ಸಹಿ ಹಾಕಿ ನೀಡಿದ್ದಾರೆ.

ರಾಜೀನಾಮೆ ಪತ್ರವನ್ನು ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್ ಇವರಿಗೆ ಸುಧಾಕರ್.ಬಿ.ಎಲ್ ದಿನಾಂಕ 16/04/2022 ರಂದು ಸಲ್ಲಿಸಿದ್ದಾರೆ.

- Advertisement -
spot_img

Latest News

error: Content is protected !!