- Advertisement -
- Advertisement -
ಸುಳ್ಯದಿಂದ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಪತ್ತೆಯಾಗಿದ್ದಾರೆ. ಸುಳ್ಯ ಪರಿವಾರಕಾನದಲ್ಲಿರುವ ರಾಜೇಂದ್ರ ಎಂಬವರ ಪತ್ನಿ ನಂದಿನಿ ಮತ್ತು ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದರು. ಹೀಗಾಗಿ ರಾಜೇಂದ್ರ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪತ್ರಿಕೆಗಳಲ್ಲಿ ಈ ಕುರಿತು ವರದಿಯಾದಾಗ, ನಂದಿನಿಯವರು ತಮ್ಮ ತಾಯಿ ಮನೆಗೆ ತೆರಳಿದ್ದರು ಎನ್ನಲಾಗಿದೆ.
ನಂದಿನಿ ಉಡುಪಿಯ ಕಟಪಾಡಿಯಲ್ಲಿರುವ ತಾಯಿ ಮನೆಯಲ್ಲಿ ಇದ್ದರು ಎನ್ನಲಾಗಿದೆ. ಬಳಿಕ ಅವರನ್ನು ಸುಳ್ಯ ಠಾಣೆಗೆ ಪೊಲೀಸರು ಕರೆತಂದು ಠಾಣೆಯಲ್ಲಿ ಮಾತುಕತೆ ನಂತರ ಗಂಡ ರಾಜೇಂದ್ರ ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
- Advertisement -