Friday, May 3, 2024
Homeಮಹಾನ್ಯೂಸ್ಕ್ವಾರಂಟೈನ್ ಕೇಂದ್ರದಲ್ಲೇ ಮಹಿಳೆಯ ಮೇಲೆ ಅತ್ಯಾಚಾರ?

ಕ್ವಾರಂಟೈನ್ ಕೇಂದ್ರದಲ್ಲೇ ಮಹಿಳೆಯ ಮೇಲೆ ಅತ್ಯಾಚಾರ?

spot_img
- Advertisement -
- Advertisement -

ಮುಂಬೈ: ಇಡೀ ದೇಶ ಕೊರೊನಾ ಸಂಕಟದಿಂದ ನಲುಗುತ್ತಿದ್ದರೆ, ಅತ್ತ ಮುಂಬೈನಲ್ಲಿ ಇಡೀ ದೇಶವೇ ತಲೆತಗ್ಗಿಸುವ ಘಟನೆಯೊಂದು ನಡೆದಿದೆ ಎನ್ನಲಾಗುತ್ತಿದೆ. ವಾಣಿಜ್ಯ ನಗರಿಯ ಕ್ವಾರಂಟೈನ್‍ ಕೇಂದ್ರವೊಂದರಲ್ಲಿ ಕೊರೊನಾ ಪಾಸಿಟಿವ್‍ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಈ ಕುರಿತಂತೆ ಖಾಸಗಿ ಸುದ್ದಿ ಏಜೆನ್ಸಿಯೊಂದು ವರದಿ ಮಾಡಿದ್ದು, 40 ವಯಸ್ಸಿನ ಮಹಿಳೆ ಮೇಲೆ ಗುರುವಾರ ರಾತ್ರಿ ಅತ್ಯಾಚಾರ ನಡೆದಿದೆ ಎಂಬ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ನವೀ ಮುಂಬೈ ಪ್ರದೇಶದ ಪನವೇಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಮಾನುಷ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಗೆ ಕೊರೊನಾ ಪಾಸಿಟಿವ್ ಇತ್ತು ಎನ್ನಲಾಗಿದೆ. ಈ ಬಗ್ಗೆ ಪನವೇಲ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಅಶೋಕ್ ರಜಪೂತ್ ಮಾಹಿತಿ ದೃಢಪಡಿಸಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸುದ್ದಿ ಏಜೆನ್ಸಿ ಹೇಳಿದೆ.  ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.

ಇನ್ನೊಂದೆಡೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅತ್ಯಾಚಾರ ನಡೆದಿರುವುದನ್ನು ಅಲ್ಲಗಳೆದಿದೆ. ಪನವೇಲ್ ಪ್ರದೇಶದ ಕ್ವಾರಂಟೈನ್ ಕೇಂದ್ರದಲ್ಲಿ ಕೇವಲ ಪುರುಷ ರೋಗಿಗಳನ್ನು ಮಾತ್ರ ಇರಿಸಲಾಗುತ್ತದೆ ಎಂದು ಪಾಲಿಕೆ ಸ್ಪಷ್ಟನೆ ನೀಡಿದೆ. ಕಳೆದ 4 ತಿಂಗಳಿನಿಂದ ಇಡೀ ಮುಂಬೈ ಮಹಾನಗರ ಕೊರೊನಾ ಹಾವಳಿಯಿಂದ ನಲುಗುತ್ತಿದೆ. ಭಾರತದ ವುಹಾನ್ ಎಂದೇ ಕರೆಯಲ್ಪಡುತ್ತಿರುವ ಮುಂಬೈನಲ್ಲಿ ಕೋವಿಡ್ ಸೋಂಕು ಎಲ್ಲೆ ಮೀರಿ ತನ್ನ ಆರ್ಭಟ ತೋರಿಸುತ್ತಿದೆ. ಹೀಗಿರುವಾಗ ಇಂತಹ ಅಸಹ್ಯಕರ ಘಟನೆ ನಡೆದಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.

- Advertisement -
spot_img

Latest News

error: Content is protected !!