Tuesday, April 23, 2024
Homeಕರಾವಳಿಮಂಗಳೂರು ಎಸ್ ಪಿ ಕಚೇರಿಯಲ್ಲಿ ಪಿಎಸ್ ಐ ಆಗಿದ್ದ ಗರ್ಭಿಣಿ ಕೋವಿಡ್ ಗೆ ಬಲಿ

ಮಂಗಳೂರು ಎಸ್ ಪಿ ಕಚೇರಿಯಲ್ಲಿ ಪಿಎಸ್ ಐ ಆಗಿದ್ದ ಗರ್ಭಿಣಿ ಕೋವಿಡ್ ಗೆ ಬಲಿ

spot_img
- Advertisement -
- Advertisement -

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ಕಚೇರಿಯಲ್ಲಿ ಪ್ರೊಬೆಷನರಿ ಪಿಎಸ್ ಐ ಆಗಿ ಕರ್ತವ್ಯ ನಿಭಾಯಿಸುತ್ತಿದ್ದ ಯುವತಿ ಶಾಮಿಲಿ(24) ಕೋವಿಡ್ ಗೆ ಬಲಿಯಾಗಿದ್ದಾರೆ.

ಈ ಕುರಿತು ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಅವರು, ತಮ್ಮ ಟ್ವೀಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಪೊಲೀಸ್ ಕುಟುಂಬದಲ್ಲಿ ಕಿರಿಯ ಸದಸ್ಯರಾಗಿರುವ ಶಾಮಿಲಿ ಕೋವಿಡ್ ಗೆ ಬಲಿಯಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಲ್ಲರೂ ಕೋವಿಡ್ ನಿಯಮ ಪಾಲಿಸಿ ಪೊಲೀಸರೊಂದಿಗೆ ಸಹಕರಿಸಿ, ಸುರಕ್ಷಿತವಾಗಿರಿ ಎಂದು ಈ ವೇಳೆ ಮನವಿ ಮಾಡಿದ್ದಾರೆ.

24 ವರ್ಷದ ಪ್ರೊಬೆಷನರಿ ಪಿಎಸ್ ಐ ಶಾಮಿಲಿ ಮೂಲತಃ ಕೋಲಾರದವರು. ಜನವರಿ 11 ರಂದು ಮಂಗಳೂರು ಎಸ್ ಪಿ ಕಚೇರಿಯಲ್ಲಿ ಸೇವೆ ಆರಂಭಿಸಿದ್ದರು. 7 ತಿಂಗಳ ಗರ್ಭಿಣಿಯಾಗಿದ್ದ ಅವರು, ರಜೆ ತೆಗೆದುಕೊಂಡು ತಮ್ಮ ಊರು ಕೋಲಾರಕ್ಕೆ ಮರಳಿದ್ದರು.

ಬಳಿಕ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಮೇ 2 ರಂದು ಕೋವಿಡ್ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ 4:30 ರ ಹೊತ್ತಿಗೆ ನಿಧನರಾಗಿದ್ದಾರೆ. ಗರ್ಭಿಣಿಯಾಗಿದ್ದ ಕಾರಣ ಅವರು ಕೋವಿಡ್ ಲಸಿಕೆ ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ.

- Advertisement -
spot_img

Latest News

error: Content is protected !!