Thursday, June 4, 2026
Homeಕರಾವಳಿಮಂಗಳೂರು: ನಿರ್ಲಕ್ಷ್ಯ ತೋರಿದ ಬ್ಯಾಂಕ್ ಸಿಬ್ಬಂದಿ ವಿರುದ್ದ ಮಹಿಳೆ ಪ್ರತಿಭಟನೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್...

ಮಂಗಳೂರು: ನಿರ್ಲಕ್ಷ್ಯ ತೋರಿದ ಬ್ಯಾಂಕ್ ಸಿಬ್ಬಂದಿ ವಿರುದ್ದ ಮಹಿಳೆ ಪ್ರತಿಭಟನೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ 

- Advertisement -
- Advertisement -

ಮಂಗಳೂರು: ನಿರ್ಲಕ್ಷ್ಯ ತೋರಿದ ಬ್ಯಾಂಕ್ ಸಿಬ್ಬಂದಿ ವಿರುದ್ಧ ಮಹಿಳೆ ಪ್ರತಿಭಟನೆ ಮಾಡಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ನ ಖಾಸಗಿ ಬ್ಯಾಂಕ್ ನಲ್ಲಿ ನಡೆದಿದೆ.ಮಹಿಳೆ ತನ್ನ  ಖಾತೆಗೆ ಹಣ ಹಾಕಲು ಬ್ಯಾಂಕ್ ಗೆ ಬಂದಿದ್ದರು. ಈ ವೇಳೆ ಕೌಂಟರ್‌ ನಲ್ಲಿ ಪಡೆಯದೇ ಯಂತ್ರದ ಮೂಲಕ ಹಣ ಜಮಾ ಮಾಡಲು ಸೂಚಿಸಿದ್ದಾರೆ ಸಿಬ್ಬಂದಿ.

ಅದರಂತೆ ಮಹಿಳೆ  ಯಂತ್ರದಲ್ಲಿ ಹಣ ಹಾಕುವ ವೇಳೆ ತಾಂತ್ರಿಕ ಕಾರಣದಿಂದ ‌ಮೆಷಿನ್ ಸ್ಥಗಿತವಾಗಿದೆ. ಇದರಿಂದ ಗಾಬರಿಯಾದ‌ ಮಹಿಳೆ ಹಣ ಜಮೆ ಮಾಡುವಂತೆ ಬ್ಯಾಂಕ್ ಸಿಬ್ಬಂದಿಯಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ‌ಬ್ಯಾಂಕ್ ಸಿಬ್ಬಂದಿ ಬಳಿ ಹೇಳಿದಾಗ ಉಡಾಫೆ ವರ್ತನೆ ತೋರಿದ್ದಾರೆ. ಅಲ್ಲದೇ ಸಮಸ್ಯೆ ಬಗೆಹರಿಸಲು ನಾಲ್ಕೈದು ದಿನಗಳಾಗುತ್ತೆ ಅಂತ ಉಡಾಫೆ ಉತ್ತರ ನೀಡಿದ್ದಾರೆ. ಮಹಿಳೆ ಆಸ್ಪತ್ರೆಗೆ ಕಟ್ಟಲು ತಂದಿದ್ದ ಹಣ ಈ ರೀತಿ ಆಗಿದ್ದನ್ನು ಕಂಡು ಗಾಬರಿಯಾದ ಮಹಿಳೆ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಅಲ್ಲೇ ಪ್ರತಿಭಟನೆ ನಡೆಸಿದ್ದಾರೆ.

ಬಳಿಕ ಮಧ್ಯ ಪ್ರವೇಶಿಸಿದ ಪೊಲೀಸರು  ತಾಂತ್ರಿಕ ಸಮಸ್ಯೆ ಸರಿ ಪಡಿಸಿ ಮಾಡುವಂತೆ ಬ್ಯಾಂಕ್ ಸಿಬ್ಬಂದಿಗೆ ತಿಳಿಸಿ ನಗದು ಮಹಿಳೆಯ ಖಾತೆಗೆ ಜಮಾ ಮಾಡಿಸಿದ್ದಾರೆ. ಇನ್ನು ಬ್ಯಾಂಕ್ ಮುಂಭಾಗ ಮಹಿಳೆ ಆಕ್ರೋಶ ವ್ಯಕ್ತಪಡಿಸೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!