Friday, June 5, 2026
Homeಕರಾವಳಿಉಡುಪಿಉಡುಪಿ: ಮನೆಯ ಮಹಡಿಯಲ್ಲಿ ಆಕಸ್ಮಿಕ ಬೆಂಕಿ ದುರಂತ: ಲಕ್ಷಾಂತರ ರೂಪಾಯಿ ಹಾನಿ

ಉಡುಪಿ: ಮನೆಯ ಮಹಡಿಯಲ್ಲಿ ಆಕಸ್ಮಿಕ ಬೆಂಕಿ ದುರಂತ: ಲಕ್ಷಾಂತರ ರೂಪಾಯಿ ಹಾನಿ

- Advertisement -
- Advertisement -

ಉಡುಪಿ: ಮನೆಯೊಂದರ ಮಹಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಉಡುಪಿಯ ಮಲ್ಪೆ ಸಮೀಪ ನಡೆದಿದೆ.

ಕಲ್ಮಾಡಿಯ ನಿವಾಸಿ ವಿಠ್ಠಲ್ ಕೋಟ್ಯಾನ್ ಎಂಬವರ ಮನೆಯ ಮಹಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಎಲ್ಲಾ ಕಡೆ ಆವರಿಸಿದೆ. ನಂತರ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದ್ದಾರೆ. ಕಲ್ಮಾಡಿಯ ಸ್ಥಳೀಯರು ಕೂಡ ಬೆಂಕಿ ನಂದಿಸಲು ಸಹಕರಿಸಿದ್ದಾರೆ ಎನ್ನಲಾಗಿದೆ.ಘಟನೆಯಿಂದ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ ಎನ್ನಲಾಗಿದೆ.

- Advertisement -

Latest News

error: Content is protected !!