Saturday, June 6, 2026
Homeತಾಜಾ ಸುದ್ದಿಪತಿ ಎಂದು ಹೇಳಿ ಬಾಯ್ ಫ್ರೆಂಡ್ ಜೊತೆ ಕ್ವಾರಂಟೈನ್ ಆದ ಮಹಿಳಾ ಪೊಲೀಸ್ ಪೇದೆ.. ಮುಂದೆ...

ಪತಿ ಎಂದು ಹೇಳಿ ಬಾಯ್ ಫ್ರೆಂಡ್ ಜೊತೆ ಕ್ವಾರಂಟೈನ್ ಆದ ಮಹಿಳಾ ಪೊಲೀಸ್ ಪೇದೆ.. ಮುಂದೆ ಆದದ್ದೇ ಬೇರೆ..

- Advertisement -
- Advertisement -

ನಾಗಪುರ: ಈ ಕೊರೊನಾದಿಂದಾಗಿ ಎಷ್ಟೆಲ್ಲಾ ಅನಾಹುತಗಳಾಗುತ್ತಿದೆಯೋ ಹಾಗೇ ಅದೆಷ್ಟೋ ಭಯಾನಕ ಸತ್ಯಗಳು ಹೊರಗಡೆ ಬರುತ್ತಿರೋದಂತು ಸುಳ್ಳಲ್ಲ. ಅದೆಷ್ಟೋ ಅಕ್ರಮ ಸಂಬಂಧಗಳೂ ಕೂಡ ಕೊರೊನಾದಿಂದಾಗಿ ಅಂದ್ರೆ ನೀವು ನಂಬಲೇ ಬೇಕು.

ಅಂದ್ಹಾಗೆ ಇಂತಹದ್ದೇ ಒಂದು ಘಟನೆ ನಾಗಪುರದಲ್ಲಿ ನಡೆದಿದೆ. ನಾಗಪುರದ ಸುರೇಂದ್ರ ನಗರ ಭಾಗದಲ್ಲಿಯ ಪೊಲೀಸ್ ಪ್ರಶಿಕ್ಷಣಾ ಕೇಂದ್ರದ ಪರಿಸರದಲ್ಲಿ ಕ್ವಾರಂಟೈನ್ ಸೆಂಟರ್ ಇದೆ. ಕೊರೊನ ಕಾರಣದಿಂದ ಇಲ್ಲಿ ಕ್ವಾರಂಟೈನ್ ಆಗ ಬಯಸುವ ಪೊಲೀಸರನ್ನು ಇಡಲಾಗಿತ್ತು.  ಇದೇ ಕ್ವಾರಂಟೈನ್ ಕೇಂದ್ರದಲ್ಲಿ ಕ್ವಾರಂಟೈನ್ ಆಗೋದಕ್ಕೆ ಮಹಿಳಾ ಪೊಲೀಸ್ ಒಬ್ಬಳು ಬಂದಿದ್ದಾಳೆ. ಆಕೆ ಬರುವಾಗ ಒಬ್ಬ ಯುವಕನನ್ನೂ ಕರೆದುಕೊಂಡು ಬಂದಿದ್ದಾಳೆ. ಅಲ್ಲದೇ ಈತ ನನ್ನ ಗಂಡ ಈತನಿಗೂ ಕೊರೊನಾ ಭೀತಿಯಿದೆ. ಹಾಗಾಗಿ ನಾವಿಲ್ಲಿ ಕ್ವಾರಂಟೈನ್ ಆಗುತ್ತೇವೆ ಎಂದಿದ್ದಾಳೆ. ಇಬ್ಬರು ಗಂಡ ಹೆಂಡತಿ ಅಲ್ವಾ ಅಂತಾ ಕ್ವಾರಂಟೈನ್ ಸೆಂಟರ್ ಇನ್ಚಾರ್ಜ್ ಆಕೆ ಮತ್ತು ಆತ ನಿಗೆ ಜೊತೆಗಿರಲು ಒಂದು ರೂಮ್ ಕೊಟ್ಟಿದ್ದಾರೆ. ಇಬ್ಬರು ಕೆಲವು ದಿನ ಅಲ್ಲೇ ಕಳೆದಿದ್ದಾರೆ.

ಹೀಗರಬೇಕಾದ್ರೆ ನಾಗಪುರದ ಬಜಾಜ್ ನಗರ ಪೊಲೀಸ್ ಸ್ಟೇಶನ್ ನಲ್ಲಿ ಮಹಿಳೆಯೊಬ್ಬಳು ಒಂದು ಕೇಸ್ ದಾಖಲಿಸಿದ್ದಾಳೆ.  ನನ್ನ ಗಂಡ ಕೆಲವು ದಿನಗಳಿಂದ ಮನೆಗೆ ಬಂದಿಲ್ಲ, ಆಕೆಯ ಆರೋಪದಲ್ಲಿ ತನ್ನ ಗಂಡ ಕ್ವಾರಂಟೈನ್ ಸೆಂಟರ್ ನಲ್ಲಿ ಬೇರೆ ಮಹಿಳೆಯ ಜೊತೆಗೆ (ಮಹಿಳಾ ಪೊಲೀಸ್ ಜೊತೆ) ತಾನೇ ಆಕೆಯ ಗಂಡನೆಂದು ಹೇಳಿಕೊಂಡು ಇದ್ದಾನೆ. ಆದರೆ ಅಸಲಿಗೆ ಆತ ಆಕೆಯ ಗಂಡನಲ್ಲದೆ ನನ್ನ ನಿಜವಾದ ಗಂಡನಾಗಿದ್ದಾನೆಂದು  ದೂರು ನೀಡಿದ್ದಾಳೆ.

ಆಕೆಯ ದೂರು ಆಲಿಸುತ್ತಿದ್ದಂತೆ ಬಜಾಜ್ ನಗರ ಠಾಣೆ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ವರಿಷ್ಠ ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಆಗ ಅಸಲಿ ವಿಚಾರ ಗೊತ್ತಾಗಿದೆ. ಬಳಿಕ ಪೊಲೀಸರು ಇಬ್ಬರನ್ನೂ ಬೇರೆ ಬೇರೆ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದ್ದಾರೆ.

- Advertisement -

Latest News

error: Content is protected !!