Sunday, August 30, 2026
Homeಕರಾವಳಿಬೆಳ್ತಂಗಡಿಯ ಕೊಕ್ಕಡದಲ್ಲಿ‌ ಅನುಮಾನಸ್ಪದ ರೀತಿಯಲ್ಲಿ ಮಹಿಳೆ ಸಾವು: ಪತಿಯ ಕುಡಿತದ ಚಟಕ್ಕೆ ಬಲಿಯಾದ್ರಾ ಪತ್ನಿ?

ಬೆಳ್ತಂಗಡಿಯ ಕೊಕ್ಕಡದಲ್ಲಿ‌ ಅನುಮಾನಸ್ಪದ ರೀತಿಯಲ್ಲಿ ಮಹಿಳೆ ಸಾವು: ಪತಿಯ ಕುಡಿತದ ಚಟಕ್ಕೆ ಬಲಿಯಾದ್ರಾ ಪತ್ನಿ?

- Advertisement -
- Advertisement -

ಬೆಳ್ತಂಗಡಿ: ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ‌ ಸಾವನ್ನಪ್ಪಿರುವ ಘಟನೆ  ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ‌ ನಡೆದಿದೆ. ಅಗರ್ತ ಮನೆಯ ಮೋಹಿನಿ(36) ಸಾವನ್ನಪ್ಪಿದ ಮಹಿಳೆ.

ಮೋಹಿನಿಯವರ ಗಂಡ ಗಣೇಶ್ ಗೌಡ(48) ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕುಡಿದು ಗಲಾಟೆಯಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗಣೇಶ್ ಗೌಡ ಮತ್ತು ಮೋಹಿನಿಗೆ ಆರು ವರ್ಷದ ಗಂಡು ಮಗು ಇದೆ. ಸದ್ಯ ಗಂಡನನ್ನು ವಶಕ್ಕೆ ಪಡೆದು
ಧರ್ಮಸ್ಥಳ‌ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

ಧರ್ಮಸ್ಥಳ ಪಿಎಸ್ಐ ಅನಿಲ್ ಕುಮಾರ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ದಂಪತಿಯ ಆರು ವರ್ಷದ ಪುತ್ರನನ್ನು ನೋಡಿಕೊಳ್ಳಲು ಯಾರು ಮುಂದೆ ಬಾರದ ಹಿನ್ನೆಲೆ ಮಕ್ಕಳ‌ ಪಾಲನಾ ಕೇಂದ್ರಕ್ಕೆ ನೀಡಲು ಪೊಲೀಸರು ನಿರ್ಧರಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ , ಧರ್ಮಸ್ಥಳ ಪಿಎಸ್ಐ-1 ಅನಿಲ್ ಕುಮಾರ್.ಡಿ, ಪಿಎಸ್ಐ -2 ಲೋಲಾಕ್ಷ ,ಬೆಳ್ತಂಗಡಿ ಪಿಎಸ್ಐ-1 -ನಂದಕುಮಾರ್ , ಬೆಳ್ತಂಗಡಿ ಪಿಎಸ್ಐ-2 ಅರ್ಜುನ್ ಮತ್ತು ಸಿಬ್ಬಂದಿಗಳಾದ ಪ್ರಮೋದಿನಿ,ಪ್ರಶಾಂತ್,ಸತೀಶ್,ಇಬ್ರಾಹಿಂ, ಪ್ರಮೋದ್ ಕುಮಾರ್ , ವಿಜಯ ರೈ,ಚಾಲಕ ಅಸೀಪ್ ಮತ್ತು ಮಂಗಳೂರು ಬೆರಳಚ್ಚು ತಜ್ಞರಾದ ಸಚಿನ್ ರೈ, ಪ್ರಶಾಂತ್, ಗಣೇಶ್, ಸುಂದರ್ ಶೆಟ್ಟಿ ಮತ್ತಿತರರು ಭಾಗಿಯಾಗಿದ್ದರು.

- Advertisement -

Latest News

error: Content is protected !!