Saturday, June 6, 2026
Homeಕರಾವಳಿಬಂಟ್ವಾಳ: ಬೆಳ್ತಂಗಡಿಯಿಂದ ತಾಯಿ ಮನೆಗೆಂದು ಹೋದ ಮಹಿಳೆ ನಾಪತ್ತೆ

ಬಂಟ್ವಾಳ: ಬೆಳ್ತಂಗಡಿಯಿಂದ ತಾಯಿ ಮನೆಗೆಂದು ಹೋದ ಮಹಿಳೆ ನಾಪತ್ತೆ

- Advertisement -
- Advertisement -

ಬಂಟ್ವಾಳ: ಬೆಳ್ತಂಗಡಿಯಿಂದ ಬಂಟ್ವಾಳದ ಅರಳದಲ್ಲಿರುವ ತನ್ನ ತಾಯಿ ಮನೆಗೆ ಅಂತಾ ಇಬ್ಬರು ಮಕ್ಕಳೊಂದಿಗೆ ತೆರಳಿದ  ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಆಶಾಲತಾ (25) ನಾಪತ್ತೆಯಾದ ಮಹಿಳೆ.

ಮೇ 7ರಂದು ಪುತ್ರಿ ಆಶಾಲತಾ  ಇಬ್ಬರು ಮಕ್ಕಳಾದ ಮಾನ್ಯ, ಆಕೇಶನೊಂದಿಗೆ ಬೆಳ್ತಂಗಡಿಯಿಂದ ತನ್ನ ಮನೆಯಾದ ಬಂಟ್ವಾಳದ ಅರಳದಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದರು.  ಮೇ 14ರಂದು ಬೆಳಗ್ಗೆ 11.30ರ ಸುಮಾರಿಗೆ ಬಾಡಿಗೆ ರಿಕ್ಷಾದಲ್ಲಿ ಆಶಾಲತಾ ಅವರು ತನ್ನ ತಾಯಿ ಪಾರಿಜಾತ ಹಾಗೂ ಇಬ್ಬರು ಮಕ್ಕಳೊಂದಿಗೆ ಅಜ್ಜಿ ಮನೆಗೆ ತೆರಳಿದ್ದಾರೆ.

ಆಟೋ ರಿಕ್ಷಾ ಸಜೀಪಮುನ್ನೂರಿನ ನಗ್ರಿಗೆ ತಲುಪುತ್ತಿದ್ದಂತೆ ಆಶಾಲತಾ ಅವರು ತಾಯಿ ಹಾಗೂ ಪುತ್ರಿ ಮಾನ್ಯಳನ್ನು ಮತ್ತೆ ಅರಳಕ್ಕೆ ಹೋಗುವಂತೆ ಹೇಳಿ ತಾನು ಪುತ್ರನೊಂದಿಗೆ ಅಲ್ಲೇ ಸಮೀಪದಲ್ಲಿರುವ ಅಜ್ಜಿ ಮನೆಗೆ ನಡೆದುಕೊಂಡು ಹೋಗುವುದಾಗಿ ಹೇಳಿ ರಿಕ್ಷಾದಿಂದ ಇಳಿದಿದ್ದಾರೆ.

ಈ ವಿಚಾರವನ್ನು ಸಂಜೆ ಪತ್ನಿ ಪಾರಿಜಾತ ಅವರು ಗಂಡ ಮೋನಪ್ಪ ಅವರ ಬಳಿ ತಿಳಿಸಿದ್ದು, ಅವರು ಮತ್ತೆ ಕರೆದುಕೊಂಡು ಬರುವಂತೆ ತಿಳಿಸಿದ್ದಾರೆ. ಹೀಗಾಗಿ ಪಾರಿಜಾತ ಅವರು ಮೇ 15ರಂದು ತವರು ಮನೆಗೆ ಬಂದು ತಂದೆ-ತಾಯಿಯರಲ್ಲಿ ವಿಚಾರಿಸಿದಾಗ ಆಕೆ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.ಇದೀಗ ಪುತ್ರಿ ಹಾಗೂ ಮೊಮ್ಮಗ ನಾಪತ್ತೆಯಾಗಿರುವ ಕುರಿತು ಅರಳ ನಿವಾಸಿ ಆಶಾಲತಾ ಅವರ ತಂದೆ ಮೋನಪ್ಪ ಸಪಲ್ಯ ಅವರು ದೂರು ನೀಡಿದ್ದಾರೆ.

- Advertisement -

Latest News

error: Content is protected !!