- Advertisement -
- Advertisement -
ಅರಂತೋಡು: ಮರ್ಕಂಜದ ಮಿತ್ತಡ್ಕ ಎಂಬಲ್ಲಿಯ ಮೋಹನ್ ಎಂಬವರ ಪತ್ನಿ ಶೋಭಾಲತಾ ಎಂಬವರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಮನೆಯ ಬಳಿ ಇರುವ ಬಾವಿಗೆ ಹಾರಿರುವ ಶಂಕೆ ಹಿನ್ನೆಲೆ ಶುಕ್ರವಾರದಿಂದ ಬಾವಿಯಲ್ಲಿ ಹುಡುಕಾಟ ಆರಂಭಗೊಂಡಿದೆ.
ಗುರುವಾರ ಅಗ್ನಿಶಾಮಕ ದಳದ ಸಹಕಾರದಿಂದ ಬಾವಿಯ ನೀರು ಖಾಲಿ ಮಾಡಿ ಹುಡುಕುವ ಪ್ರಯತ್ನ ನಡೆಸಲಾಯಿತು
ಆದರೆ ಒಳಭಾಗದಲ್ಲಿ ಬಾವಿ ಜರಿಯುತ್ತಿದ್ದ ಕಾರಣ ಕಾರ್ಯಾಚರಣೆ ನಿಲ್ಲಿಸಲಾಯಿತು. ನಿನ್ನೆ ಸಂಜೆಯ ವೇಳೆಗೆ ಸ್ಥಳಕ್ಕೆ ಬಂದ ಸುಳ್ಯ ತಹಶೀಲ್ದಾರ್ ಅವರು ಹಿಟಾಚಿ ಯಂತ್ರದ ಮೂಲಕ ಮಣ್ಣು ಅಗೆಯಲು ಸೂಚನೆ ನೀಡಿದರು. ಅದರಂತೆ ಹಿಟಾಚಿ ಯಂತ್ರ ಬಂದು ಮಣ್ಣು ತೆಗೆಯುವ ಕಾರ್ಯಾಚರಣೆ ಆರಂಭವಾಗಿದೆ..
- Advertisement -