Thursday, June 4, 2026
Homeಕರಾವಳಿಸುಳ್ಯದಲ್ಲಿ ಪತಿಯಿಂದ ಪತ್ನಿಯ ಕೊಲೆಗೆ ಯತ್ನ ಆರೋಪ; ದೂರು ದಾಖಲಿಸಿದ ಪತ್ನಿ

ಸುಳ್ಯದಲ್ಲಿ ಪತಿಯಿಂದ ಪತ್ನಿಯ ಕೊಲೆಗೆ ಯತ್ನ ಆರೋಪ; ದೂರು ದಾಖಲಿಸಿದ ಪತ್ನಿ

- Advertisement -
- Advertisement -

ಸುಳ್ಯ; ಪತಿ ತನಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಪತ್ನಿಯೊಬ್ಬರು ಸುಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುಳ್ಯದ ಅಜ್ಜಾವರ ಗ್ರಾಮದ ಮೇನಾಲ ಇರಂತಮಜಲಿನ ಅಬ್ದುಲ್ ನವಾಝ್ ವಿರುದ್ಧ ಅವರ ಪತ್ನಿ ರಿಹಾ ಫಾತಿಮಾ ಕೊಲೆಗೆ ಯತ್ನಿಸಿದ್ದಾರೆಂದು ದೂರು ನೀಡಿದ್ದಾರೆ.

ಅಬ್ದುಲ್ ನವಾಝ್ ಅವರು ಮೂರು ವರ್ಷಗಳ ಹಿಂದೆ ರಿಹಾ ಫಾತಿಮ ಅವರನ್ನು ವಿವಾಹವಾಗಿದ್ದರು. ಇತ್ತೀಚೆಗೆ ದಾಂಪತ್ಯದಲ್ಲಿ ವೈಮನಸ್ಸು ಉಂಟಾಗಿ ಪತಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಪತಿ ನನಗೆ ವರದಕ್ಷಿಣೆ ಕಿರುಕುಳ ನೀಡಿ, ದಿನನಿತ್ಯವು ಹಲ್ಲೆ  ಮಾಡುತ್ತಿದ್ದಾರೆ. ಅಲ್ಲದೇ ದಿಂಬನ್ನು ಮುಖಕ್ಕೆ ಒತ್ತಿಹಿಡಿದು ಉಸಿರು ಗಟ್ಟಿಸಿ ವಿಕೃತವಾಗಿ ವರ್ತಿಸುತ್ತಿದ್ದಾರೆ. ಅಲ್ಲಗೇ ನನ್ನ ತಂದೆಯನ್ನುಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಳ್ಯ ಠಾಣಾ ಪೋಲಿಸ್ ಅಧಿಕಾರಿಗಳು ಆರೋಪಿ ಯುವಕ ಅಬ್ದುಲ್ ನವಾಝ್ ನನ್ನು ಬಂಧಿಸಿ, ಆ.3 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

- Advertisement -

Latest News

error: Content is protected !!