Saturday, May 4, 2024
Homeಕರಾವಳಿಬಂಟ್ವಾಳ: ಅಪ್ರಾಪ್ತೆಗೆ ಆಟೋ ಚಾಲಕ ಲೈಂಗಿಕ ಕಿರುಕುಳ ನೀಡಿದ ಆರೋಪ: ಆರೋಪಿ ಬಾಲಕಿಗೆ ಮಾದಕ ವಸ್ತುವಿರುವ...

ಬಂಟ್ವಾಳ: ಅಪ್ರಾಪ್ತೆಗೆ ಆಟೋ ಚಾಲಕ ಲೈಂಗಿಕ ಕಿರುಕುಳ ನೀಡಿದ ಆರೋಪ: ಆರೋಪಿ ಬಾಲಕಿಗೆ ಮಾದಕ ವಸ್ತುವಿರುವ ಚಾಕಲೇಟ್ ನೀಡಿದ್ದನೇ?

spot_img
- Advertisement -
- Advertisement -

ಬಂಟ್ವಾಳ: ಆಟೋ ಚಾಲಕನೊಬ್ಬ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಬಂಟ್ವಾಳ ತಾಲೂಕಿನ ಮೆಲ್ಕಾರ್ ನಿಂದ ಕೇಳಿ ಬಂದಿದೆ.

ನರಿಕೊಂಬು ಗ್ರಾಮಪಂಚಾಯತ್ ಸದಸ್ಯೆ ಜುಬೈದಾ ಅವರ ಮಗ ನರಿಕೊಂಬು ನಿವಾಸಿ ರಿಕ್ಷಾ ಚಾಲಕ ಅಬೂಬಕ್ಕರ್ ಸಿದ್ದಿಕ್ ಎಂಬಾತ ಕಿರುಕುಳ ನೀಡಿದ್ದಾನೆ ಎಂದು ಬಾಲಕಿಯ ತಂದೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಮೆಲ್ಕಾರ್ ಮಹಿಳಾ ಕಾಲೇಜಿನಿಂದ ಮನೆಗೆ ಹೋಗಲು ರಸ್ತೆ ಬದಿಯಲ್ಲಿ ‌ಬಸ್ ಗಾಗಿ ಕಾಯುತ್ತಾ ನಿಂತಿದ್ದ ವೇಳೆ ,ಬೈಕಿನಲ್ಲಿ ಬಂದ ಸಿದ್ದಿಕ್ ಬಾಲಕಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.ಬಾಲಕಿಗೆ ಯುವಕ ಕಿರುಕುಳ ನೀಡಿದ ಕಾರಣ ಹೆದರಿದ ಬಾಲಕಿ ಮೂರ್ಛೆ ಹೋಗಿ ರಸ್ತೆ ಬದಿ ಬಿದ್ದಿದ್ದಳು, ಇದನ್ನು ನೋಡಿದ ಕಾಲೇಜಿನವರು ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ವಿಷಯ ತಿಳಿದ ಬಾಲಕಿಯ ತಂದೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಬಳಿಕ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದು,ಆರೋಪಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪರಿಣಾಮವಾಗಿ ಆಕೆ ಹೆದರಿ ಮೂರ್ಛೆ ತಪ್ಪಿ ಬಿದ್ದಿದ್ಧಾಳೆ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ.

ಇನ್ನು  ರಿಕ್ಷಾ ಚಾಕನೋರ್ವ ಬಾಲಕಿ ಗೆ ಮಾದಕ ವಸ್ತುವಿರುವ ಚಾಕಲೇಟ್ ನೀಡಿದ್ದ. ಇದನ್ನು  ತಿಂದ ಬಾಲಕಿ ಮೂರ್ಛೆ ಹೋಗಿ ಬಿದ್ದಿದ್ದಾಳೆ, ಅವಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಹರಿದಾಡಿತ್ತುಯ ಈ ಸುದ್ದಿ ಹರಡಿದ ಕೂಡಲೇ ಆಸ್ಪತ್ರೆಯಲ್ಲಿ ಜನ ಸೇರಿದ್ದರು.ವಿಷಯ ತಿಳಿದ‌ ಕೂಡಲೇ ಚಾಕಲೇಟ್ ನ್ನು ಪೋಲೀಸರು ವಶಕ್ಕೆ ಪಡದುಕೊಂಡು ಪರೀಕ್ಷೆ ನಡೆಸಿದ್ದಾರೆ. ಆದರೆ ಚಾಕಲೇಟ್ ಸೀಲ್ಡ್ ಆಗಿದ್ದು ಮಾದಕ ಚಾಕಲೇಟ್ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಯಾವುದೇ ಸಂದೇಹ ಬೇಡ, ಆರೋಪಿಯನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!