Saturday, June 6, 2026
Homeಕರಾವಳಿಕಡಬ: ಕುಮಾರಧಾರ ನದಿಯಲ್ಲಿ ತೆಪ್ಪ ಮಗುಚಿ ಮಹಿಳೆ ಸಾವು

ಕಡಬ: ಕುಮಾರಧಾರ ನದಿಯಲ್ಲಿ ತೆಪ್ಪ ಮಗುಚಿ ಮಹಿಳೆ ಸಾವು

- Advertisement -
- Advertisement -

ಕಡಬ: ತೆಪ್ಪ ಮಗುಚಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಏಣಿತ್ತಡ್ಕ ಎಂಬಲ್ಲಿ ಕುಮಾರಧಾರ ನದಿಯಲ್ಲಿ ನಡೆದಿದೆ. ಏಣಿತ್ತಡ್ಕ ನಿವಾಸಿ ಬಾಳಪ್ಪ ನಾಯ್ಕ ಎಂಬುವವರ ಪತ್ನಿ ಗೀತಾ(46) ಮೃತ ಮಹಿಳೆ.

ಕುಮಾರಧಾರ ಹೊಳೆಯ ಇನ್ನೊಂದು ಮಗ್ಗುಲಲ್ಲಿರುವ ಅರೆಲ್ತಡ್ಕ ಎಂಬಲ್ಲಿಂದ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಹುಲ್ಲು ತುಂಬಿಸಿಕೊಂಡು ತೆಪ್ಪದಲ್ಲಿ ನದಿ ದಾಟುತ್ತಿದ್ದಾಗ ಮಧ್ಯ ಭಾಗಕ್ಕೆ ಬಂದಾಗ ಗಾಳಿ ಜೋರಾಗಿ ಬೀಸಿದ ಪರಿಣಾಮ  ತೆಪ್ಪ ಮಗುಚಿ ಬಿದ್ದಿದೆ ಪರಿಣಾಮ ಗೀತಾ ನದಿಗೆ ಬಿದ್ದಿದ್ದಾರೆ.

ಇನ್ನು ತೆಪ್ಪದಲ್ಲಿದ್ದ ಇನ್ನಿಬ್ಬರು ಮಹಿಳೆಯರು ಹುಲ್ಲು ತುಂಬಿದ್ದ ಗೋಣಿ ಚೀಲದ ಸಹಾಯದಿಂದ ಈಜಿ ದಡ ಸೇರಿದ್ದಾರೆ.ಆದರೆ ಗೀತಾ ನೀರಿನಲ್ಲಿ ಮುಳುಗಿದ್ದಾರೆ . ವಿಷಯ ತಿಳಿದು ನೀರಿಗಿಳಿದ ಸ್ಥಳಿಯರಾದ ರಾಮಕೃಷ್ಣ, ನೇತ್ರಾಕ್ಷ ಮತ್ತಿತರರು ಹುಡುಕಾಡಿದಾಗ ಗೀತಾ ಅದಾಗಲೇ ಮೃತಪಟ್ಟಿದ್ದಾರೆ.

ಕಡಬ. ಠಾಣಾ ಎ.ಎಸ್ ಐ ಶಿವರಾಮ, ಕಾನ್ಸ್ ಟೇಬಲ್ ಚಂದನ್ ಸ್ಥಳಕ್ಕಾಗಮಿಸಿ ಪರೀಶಿಲನೆ ನಡೆಸಿದ್ದಾರೆ. ಮೃತರ ಪತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಇಬ್ಬರು ಪುತ್ರರು ಹಾಗು ಓರ್ವ ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!