Thursday, May 2, 2024
Homeಕರಾವಳಿಕಾಸರಗೋಡುಮಕ್ಕಳನ್ನು ಬಿಟ್ಟು ಬಾವನೊಂದಿಗೆ ಪರಾರಿಯಾದ ಮಹಿಳೆಯನ್ನು ಬಂಧಿಸಿದ ಪೊಲೀಸರು

ಮಕ್ಕಳನ್ನು ಬಿಟ್ಟು ಬಾವನೊಂದಿಗೆ ಪರಾರಿಯಾದ ಮಹಿಳೆಯನ್ನು ಬಂಧಿಸಿದ ಪೊಲೀಸರು

spot_img
- Advertisement -
- Advertisement -

ಕೇರಳ: ಮಕ್ಕಳನ್ನು ಬಿಟ್ಟು ಬಾವನೊಂದಿಗೆ ಪರಾರಿಯಾಗಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.

ಕೊಲ್ಲಂನ ಮುಂಡಕ್ಕಲ್​ ನಿವಾಸಿ ಐಶ್ವರ್ಯಾ (28) ಮತ್ತು ಆಕೆಯ ಸಹೋದರಿಯ ಗಂಡ ಸಂಜಿತ್​ (36) ಎಂಬಾತನನ್ನು ಮಧುರೈನಲ್ಲಿ ಬಂಧಿಸಲಾಗಿದೆ. ಸಂಜಿತ್​ಗೆ ಇಬ್ಬರು ಮಕ್ಕಳಿದ್ದು, ಐಶ್ವರ್ಯಾಗೆ ಒಂದು ಮಗುವಿದೆ. ಮಕ್ಕಳನ್ನು ಬಿಟ್ಟು ಹೋಗಿದ್ದಕ್ಕೆ ಇಬ್ಬರ ವಿರುದ್ಧ ದೂರು ದಾಖಲಿಸಲಾಗಿದೆ.

ಐಶ್ವರ್ಯಾ ನಾಪತ್ತೆಯಾದ ಬೆನ್ನಲ್ಲೇ ಆಕೆಯ ಪತಿ ಎರವಿಪುರಂ ಪೊಲೀಸ್​ ಠಾಣೆಯಲ್ಲಿ ಮತ್ತು ಆಕೆಯ ಸಂಬಂಧಿಕರು ಕೊಲ್ಲಂ ವೆಸ್ಟ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಕೊಲ್ಲಂ ವೆಸ್ಟ್ ಪೊಲೀಸರು ಸೈಬರ್​ ಸೆಲ್​ ಪೊಲೀಸರ ಸಹಾಯದಿಂದ ತನಿಖೆ ನಡೆಸಿ, ಇಬ್ಬರು ಪತ್ತೆ ಹಚ್ಚಿದ್ದಾರೆ. ಇಬ್ಬರು ನಕಲಿ ಹೆಸರಿನಲ್ಲಿ ಟಿಕೆಟ್​ ಪಡೆದ ಮದುರೈಗೆ ಪ್ರಯಾಣ ಬೆಳೆಸಿದ್ದರು.

ರೈಲ್ವೇ ಪೊಲೀಸರು ಇಬ್ಬರ ಫೋಟೋಗಳನ್ನು ಕಳುಹಿಸಿದ ಬಳಿಕ ಐಶ್ವರ್ಯಾ ಮತ್ತು ಸಂಜಿತ್​ ಸಿಕ್ಕಿಬಿದ್ದಿದ್ದಾರೆ. ಬಳಿಕ ವೆಸ್ಟ್​ ಪೊಲೀಸರು ಮದುರೈಗೆ ತೆರಳಿ ಇಬ್ಬರನ್ನು ಕರೆತಂದಿದ್ದಾರೆ. ಇದಾದ ಬಳಿಕ ಇಬ್ಬರನ್ನು ಎರವಿಪುರಂ ಠಾಣೆಗೆ ಕರೆದೊಯ್ದು ಒಪ್ಪಿಸಲಾಗಿದೆ. 

- Advertisement -
spot_img

Latest News

error: Content is protected !!