Friday, June 5, 2026
Homeಕರಾವಳಿಸುಳ್ಯದಲ್ಲಿ 12 ದಿನದ ಬಾಣಂತಿ ಸಾವು

ಸುಳ್ಯದಲ್ಲಿ 12 ದಿನದ ಬಾಣಂತಿ ಸಾವು

- Advertisement -
- Advertisement -

ಸುಳ್ಯ: ಹೆರಿಗೆಯಾಗಿ ಕೇವಲ 12 ದಿನಕ್ಕೆ ಬಾಣಂತಿಯೊಬ್ಬರು ಸಾವನ್ನಪ್ಪಿದ ಘಟನೆ ಸುಳ್ಯದ ಜಟ್ಟಿಪಳ್ಳದಲ್ಲಿ ನಡೆದಿದೆ.ಸುಳ್ಯ ತಾಲೂಕು ಜಟ್ಟಿಪಳ್ಳದ ನಿವಾಸಿ ಲೀಲಾ ಎಂಬವರ ಪುತ್ರಿ ಗೀತಾ (30) ಸಾವನ್ನಪ್ಪಿದ ಬಾಣಂತಿ. ಲೀಲಾ ಅವರನ್ನು ಚೊಕ್ಕಾಡಿಯ ಜಗದೀಶ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ಗಂಡು ಮಗುವಿದ್ದು, ಎರಡನೇ ಹೆರಿಗೆಗಾಗಿ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರು 12 ದಿನಗಳ ಹಿಂದೆ ಅವರು ಹೆಣ್ಣು ಮಗುವಿಗೆ ನೀಡಿದ್ದರು. ಬಳಿಕ ಅವರು ಮಗು ಸಮೇತ ತಾಯಿ ಮನೆಗೆ ಬಂದಿದ್ದರು. ನ. 20 ರಂದು ಬೆಳಿಗ್ಗೆ ತೀವ್ರ ಅನಾರೋಗ್ಯಕ್ಕೆ ಒಳಗಾದ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ರಾತ್ರಿ 8.30 ರ ವೇಳೆಗೆ ಅವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

- Advertisement -

Latest News

error: Content is protected !!