Friday, June 5, 2026
Homeತಾಜಾ ಸುದ್ದಿಸುಳ್ಯದ ದುಗಲಡ್ಕದಲ್ಲಿ ರಿಕ್ಷಾದಿಂದ ಬಿದ್ದು ಮಹಿಳೆ ಸಾವು

ಸುಳ್ಯದ ದುಗಲಡ್ಕದಲ್ಲಿ ರಿಕ್ಷಾದಿಂದ ಬಿದ್ದು ಮಹಿಳೆ ಸಾವು

- Advertisement -
- Advertisement -

ಸುಳ್ಯ:  ಇಲ್ಲಿನ ದುಗ್ಗಲಡ್ಕ ನೀರಬಿದಿರೆಯ ಕೊಯಿಕುಳಿ ಶಾಲಾ ಬಳಿ ರಿಕ್ಷಾದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಲಲಿತಾ(40) ಮೃತ ಮಹಿಳೆ.

ಲಲಿತಾ ಅವರು ತಮ್ಮ ಸಂಬಂಧಿಕರಾದ ನಾಗೇಶ್ ಎಂಬವರ ರಿಕ್ಷಾದಲ್ಲಿ ಸುಳ್ಯಕ್ಕೆ ಬರುತ್ತಿದ್ದಾಗ ಆರ್ತಾಜೆ ಸಮೀಪ ಅವರು ರಿಕ್ಷಾದಿಂದ ರಸ್ತೆಗೆ ಬಿದ್ದಿದ್ದರು. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ನಿನ್ನೆ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!