Thursday, June 4, 2026
Homeಕರಾವಳಿಹಾಸನದ ರೇವ್ ಪಾರ್ಟಿಯಲ್ಲಿ ಭಾಗಿ: ಮಂಗಳೂರಿನ ಲೇಡಿ ಹೆಡ್ ಕಾನ್ಸ್ ಟೇಬಲ್ ‌ಅಮಾನತು

ಹಾಸನದ ರೇವ್ ಪಾರ್ಟಿಯಲ್ಲಿ ಭಾಗಿ: ಮಂಗಳೂರಿನ ಲೇಡಿ ಹೆಡ್ ಕಾನ್ಸ್ ಟೇಬಲ್ ‌ಅಮಾನತು

- Advertisement -
- Advertisement -

ಮಂಗಳೂರು: ಹಾಸನದ ರೇವ್ ಪಾರ್ಟಿಯಲ್ಲಿ ಭಾಗಿಯಾದ ಹಿನ್ನೆಲೆ ಮಂಗಳೂರಿನ ಲೇಡಿ ಹೆಡ್ ಕಾನ್ಸ್ ಟೇಬಲ್ ರನ್ನು ‌ಅಮಾನತು ಮಾಡಲಾಗಿದೆ.

ಆ್ಯಂಡ್ ನಾರ್ಕೊಟಿಕ್‌ ಕ್ರೈಂ ಠಾಣೆಯ ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ ಶ್ರೀಲತಾ ಅವರನ್ನು ಅಮಾನತು ಮಾಡಲಾಗಿದೆ.

ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಈ ಮಾಹಿತಿ ನೀಡಿದ್ದಾರೆ. ಪಾರ್ಟಿ ನಡೆದ ಸಂದರ್ಭದಲ್ಲಿ ಶ್ರೀಲತಾ ಸ್ಥಳದಲ್ಲಿದ್ದರು. ಅವರ ಪುತ್ರ ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಇದೆ. ಹಾಸನ ಪೊಲೀಸರು ತಪಾಸಣೆಗೆ ಬಂದಾಗ ಶ್ರೀಲತಾ ತಾನು ಮಂಗಳೂರು ಸಿಸಿಬಿ ಎಎಸ್‌ಐ ಎಂದು ಹೇಳಿ ವಾಗ್ವಾದ ನಡೆಸಿದ್ದು, ಹುದ್ದೆ ದುರುಪಯೋಗ ಮಾಡಿಕೊಂಡಿದ್ದಾರೆ. ಅವರಿಗೆ ಪಾರ್ಟಿಯ ಆಯೋಜಕರ ಸಂಪರ್ಕವಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಈಗಾಗಲೇ ಹಾಸನ ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!