Friday, May 3, 2024
Homeಕರಾವಳಿಸುಳ್ಯ; ಪತಿ ನಿಧನವಾಗಿ 1 ತಿಂಗಳಾಗುವ ಮೊದಲೇ ಪತ್ನಿ ಆತ್ಮಹತ್ಯೆ

ಸುಳ್ಯ; ಪತಿ ನಿಧನವಾಗಿ 1 ತಿಂಗಳಾಗುವ ಮೊದಲೇ ಪತ್ನಿ ಆತ್ಮಹತ್ಯೆ

spot_img
- Advertisement -
- Advertisement -

ಸುಳ್ಯ; ಪತಿ ನಿಧನವಾಗಿ 1 ತಿಂಗಳಾಗುವ ಮೊದಲೇ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಹೊದ್ದೆಟ್ಟಿಯಲ್ಲಿ ನಡೆದಿದೆ. ರೂಪಾ(30)ಮೃತ ದುರ್ದೈವಿ.

ಮೂಲತಃ ಕೊಡಗಿನವರಾದ ರೂಪಾ ಎರಡು ವರ್ಷಗಳ ಹಿಂದೆ ಸವಣೂರಿನ ಪೆರಿಯಡ್ಕ ದಿನೇಶ ಎಂಬವರನ್ನು ವಿವಾಹವಾಗಿದ್ದರು.  ಆದರೆ ದಿನೇಶ್ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಬಳಿಕ ರೂಪಾ ತವರು ಮನೆ ಪೆರಾಜೆಗೆ ಬಂದಿದ್ದರು. ಇದೀಗ ಈಕೆ ಗಂಡ ಮೃತಪಟ್ಟ ಕಾರಣ ಮನನೊಂದು ಬಾತ್ ರೂಂನಲ್ಲಿ ಚೂಡಿದಾರ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನುಮಾನ ಬಂದು ತಂದೆ ತಾಯಿ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

 ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಇಂದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!