Saturday, June 6, 2026
Homeಕರಾವಳಿಬಂಟ್ವಾಳ: ಕೆಎಸ್ ಆರ್ ಟಿಸಿ ಬಸ್ ಕಿಟಿಕಿ ಸರಳಿನಲ್ಲಿ ಬಟ್ಟೆ ಒಣ ಹಾಕಿದ ಮಹಿಳಾ ಪ್ರಯಾಣಿಕರು;ಇದೆಲ್ಲಾ...

ಬಂಟ್ವಾಳ: ಕೆಎಸ್ ಆರ್ ಟಿಸಿ ಬಸ್ ಕಿಟಿಕಿ ಸರಳಿನಲ್ಲಿ ಬಟ್ಟೆ ಒಣ ಹಾಕಿದ ಮಹಿಳಾ ಪ್ರಯಾಣಿಕರು;ಇದೆಲ್ಲಾ ಫ್ರೀ ಬಸ್ ಇಫೆಕ್ಟ್  ಮರ್ರೆ…

- Advertisement -
- Advertisement -

ಬಂಟ್ವಾಳ: ಸಿದ್ದರಾಮಯ್ಯ ಸರ್ಕಾರ ಮಹಿಳೆಯಿರಿಗೆ ಫ್ರೀ ಪ್ರಯಾಣದ ಅವಕಾಶ ಕಲ್ಪಿಸಿದ್ದೇ ತಡ. ಕರಾವಳಿಯತ್ತ ಮಹಿಳಾ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಅದರಲ್ಲೂ ಪುಣ್ಯಕ್ಷೇತ್ರಗಳಂತೂ ಮಹಿಳಾ ಮಣಿಗಳಿಂದ ತುಂಬಿ ತುಳುಕುತ್ತಿದೆ. ಬಸ್ ನಲ್ಲೂ ಅವರದ್ದೇ ದರ್ಬಾರ್. ಇದೆಲ್ಲಾ ಇರ್ಲಿ ಬಿಡಿ.. ಆದರೆ ಕೆಲವು ಮಹಿಳೆಯರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ವಾಯುವ್ಯ ಕರ್ನಾಟಕ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುವ ವೇಳೆ ಕಿಟಕಿಯ ಸರಳಿನಲ್ಲೇ ಬಟ್ಟೆ ಒಣ ಹಾಕಿದ್ದಾರೆ. ಸುಬ್ರಹ್ಮಣ್ಯದಿಂದ ಕಾರವಾರಕ್ಕೆ ಪ್ರಯಾಣಿಸುವ ಬಸ್ ನಲ್ಲಿ ಈ ದೃಶ್ಯ ಕಂಡು ಬಂದಿದ್ದು, ಬಸ್ ನಲ್ಲಿದ್ದ ಇತರೆ ಪ್ರಯಾಣಿಕರು ಮುಜುಗರ ಅನುಭವಿಸುವಂತಾಗಿದೆ.  ಅಲ್ಲದೇ ಸಾರ್ವಜನಿಕರಿಂದಲೂ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

- Advertisement -

Latest News

error: Content is protected !!