- Advertisement -
- Advertisement -
ಮಂಗಳೂರು: ಮುಳುಗಿದ ಹಡಗಿನ ಅವಶೇಷಗಳನ್ನು ದಡಕ್ಕೆ ತರುವ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಪಶ್ಚಿಮ ಬಂಗಾಳ ಮೂಲದ ನಾಸಿರುದ್ದೀನ್ ಖಾನ್ (32) ಎಂದು ಗುರುತಿಸಲಾಗಿದೆ.
ತಣ್ಣೀರುಬಾವಿ ಬಳಿಯ ಸಮುದ್ರದಲ್ಲಿ ಹಡಗು ಮುಳುಗಿದ್ದು, ಇದರ ಅವಶೇಷಗಳನ್ನು ಸಮುದ್ರದ ಆಳದಿಂದ ಹೊರತರುತ್ತಿದ್ದಾಗ ಹಡಗಿನ ಕಬ್ಬಿಣದ ಹ್ಯಾಂಡಲ್ ನಾಸಿರುದ್ದೀನ್ ಖಾನ್ ಅವರ ತಲೆಗೆ ಬಲವಾಗಿ ಬಡಿದ ಪರಿಣಾಮವಾಗಿ ಅವರು ಗಂಭೀರ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ.
ಈ ಘಟನೆ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -