Thursday, June 4, 2026
Homeಕರಾವಳಿಉಡುಪಿ42 ವರ್ಷದ ವಿವಾಹಿತನೊಂದಿಗೆ ಪಕ್ಕದಮನೆ ಯುವತಿ ನಾಪತ್ತೆ

42 ವರ್ಷದ ವಿವಾಹಿತನೊಂದಿಗೆ ಪಕ್ಕದಮನೆ ಯುವತಿ ನಾಪತ್ತೆ

- Advertisement -
- Advertisement -

ಗಂಗೊಳ್ಳಿ: 42 ವರ್ಷದ ವಿವಾಹಿತನೊಂದಿಗೆ 29 ವರ್ಷ ವಯಸ್ಸಿನ ನಾಪತ್ತೆ ಯಾಗಿರುವ ಘಟನೆ ಜೂ.7ರಂದು ಕುಂದಾಪುರ ತಾಲೂಕು ಗಂಗೊಳ್ಳಿಯ ಆಲೂರು ಗ್ರಾಮದ ಹಳ್ಳಿಹೆಬ್ಬಾಗಿಲು ಎಂಬಲ್ಲಿ ನಡೆದಿದೆ.

ಆಲೂರು ಗ್ರಾಮದ ಹಳ್ಳಿ ಹೆಬ್ಬಾಗಿಲು ನಿವಾಸಿ ಶೇಷಿ ಎಂಬವರ ಮಗಳು ಅವಿವಾಹಿತೆ ವನಜ(29) ಹಾಗೂ ನೆರೆಮನೆಯ ವಿವಾಹಿತ ಚಂದ್ರ(42) ಎಂಬವರು ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.  ಜೂ.7ರಂದು ಚಂದ್ರ ಪೇಟೆಗೆ ಹೋಗುವುದಾಗಿ ಹೇಳಿ ಹೋಗಿದ್ದು, ಅದೇ ದಿನ ಮಧ್ಯಾಹ್ನ ವನಜಾ ಸಹ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಇಬ್ಬರೂ ಕೂಡ ಈವರೆಗೆ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಚಂದ್ರ ಅವರ ಪತ್ನಿ ಬಾಬಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!