Sunday, June 14, 2026
Homeಉತ್ತರ ಕನ್ನಡಬಿಹಾರದಿಂದ ಜೆಡಿಯು ರಾಜ್ಯಸಭಾ ಸದಸ್ಯರಾಗಿ ಕುಂದಾಪುರ ಮೂಲದ ಅನಿಲ್ ಹೆಗ್ಡೆ

ಬಿಹಾರದಿಂದ ಜೆಡಿಯು ರಾಜ್ಯಸಭಾ ಸದಸ್ಯರಾಗಿ ಕುಂದಾಪುರ ಮೂಲದ ಅನಿಲ್ ಹೆಗ್ಡೆ

- Advertisement -
- Advertisement -

ಪಾಟ್ನಾ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಳ್ವಾಡಿ ಮೂಲದ ಅನಿಲ್ ಹೆಗ್ಡೆ ಬಿಹಾರದಿಂದ ಜೆಡಿಯು ಪಕ್ಷದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಜೆಡಿಯುನಿಂದ ರಾಜ್ಯಸಭಾ ಸದಸ್ಯರಾಗಿದ್ದ ಡಾ. ಮಹೇಂದ್ರ ಪ್ರಸಾದ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅನಿಲ್ ಹೆಗ್ಡೆ ನೇಮಕವಾಗಿದ್ದಾರೆ. ಹಲವು ವರ್ಷಗಳಿಂದ ಜೆಡಿಯು ಮತ್ತು ಚುನಾವಣಾ ಆಯೋಗದ ನಡುವಿನ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ಹೆಗ್ಡೆ ಪಾಟ್ನಾದ ಜೆಡಿಯು ಕಚೇರಿಯಲ್ಲೇ ವಾಸ್ತವ್ಯ ಇದ್ದರು.

ದಿ. ಜಾರ್ಜ್ ಫರ್ನಾಂಡೀಸ್ ಅನುಯಾಯಿಯಾಗಿದ್ದ ಅನಿಲ್ ಹೆಗ್ಡೆ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರ ಸಂಬಂಧಿಯಾಗಿದ್ದಾರೆ.

- Advertisement -

Latest News

error: Content is protected !!