Friday, June 5, 2026
Homeತಾಜಾ ಸುದ್ದಿನಿಮಗೆ ಗಂಡಸ್ತನ ಇದ್ದರೇ ಹಲಾಲ್ ವಿವಾದವನ್ನು ತಡೆಯಿರಿ- ಸಿ ಎಂ ಬೊಮ್ಮಾಯಿಗೆ ಹೆಚ್.ಡಿ. ಕೆ ...

ನಿಮಗೆ ಗಂಡಸ್ತನ ಇದ್ದರೇ ಹಲಾಲ್ ವಿವಾದವನ್ನು ತಡೆಯಿರಿ- ಸಿ ಎಂ ಬೊಮ್ಮಾಯಿಗೆ ಹೆಚ್.ಡಿ. ಕೆ ಸವಾಲು

- Advertisement -
- Advertisement -

ಬೆಂಗಳೂರು: ಬೊಮ್ಮಾಯಿಯವರೇ, ನಿಮಗೆ ಗಂಡಸ್ತನ ಇದ್ದರೇ ಹಲಾಲ್ ವಿವಾದವನ್ನು ತಡೆಯಿರಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನನಗೆ ವೋಟ್ ಮುಖ್ಯವಲ್ಲ. ಈ ಜನರ ನೆಮ್ಮದಿ, ಸಂತೋಷ ಮುಖ್ಯ. ಈ ರಾಜ್ಯದ ಜನರ ನೆಮ್ಮದಿ, ಕೇಸರಿ ಬಟ್ಟೆ ಹಾಕಿಕೊಂಡು ಜನರ ಕೋಮು ಸೌಹಾರ್ದವನ್ನು ಕದಡೋರ ಬಗ್ಗೆ ನಾನಂತೂ ಸುಮ್ಮನೇ ಇರೋದಿಲ್ಲ. ನಾನು ಈ ಪದ ಬಳಸ ಬಾರದು, ಆದರೂ ತಡೆಯಲಾರದೇ ಬಳಸ್ತಾ ಇದ್ದೇನೆ, ಹಲಾಲ್ ನಿಷೇಧ ಕುರಿತಂತೆ ಕೇಸರಿ ಬಟ್ಟೆ ಹಾಕಿಕೊಂಡು ಮನೆ ಮನೆಗೆ ಹ್ಯಾಂಡ್ ಬಿಲ್ ಹಂಚೋದನ್ನು ಬೊಮ್ಮಾಯಿಯವರೇ ನಿಮಗೆ ಗಂಡಸ್ತನ ಇದ್ದರೇ ತಡೆಯಿರಿ ಎಂದರು.

ಇನ್ನು ಇಂದು ಹಲಾಲ್ ನಿಷೇಧ ಅಭಿಯಾನ ವಿರೋಧಿಸಿ ಮನೆ ಮನೆಗೆ ತೆರಳಿ ಹ್ಯಾಂಡ್ ಬಿಲ್ ಹಂಚುತ್ತಿರೋ ಬಜರಂಗದಳದ ಕಾರ್ಯಕರ್ತರ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೇ, ಬೊಮ್ಮಾಯಿಯವರೇ ಗಂಡಸ್ತನ ಇದ್ದರೇ ಹಲಾಲ್, ವ್ಯಾಪಾರ ವಿವಾದ ತಡೆಯಿರಿ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -

Latest News

error: Content is protected !!