ಸುಳ್ಯ: ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಮಣ್ಯ ದೇವಳದ ವತಿಯಿಂದ ಲಾಕ್ ಡೌನ್ ಸಮಯದಲ್ಲಿ ಸಂಕಷ್ಟದಲ್ಲಿರುವ ಕಡುಬಡವರಿಗೆ ಆಹಾರ ಕಿಟ್ ವಿತರಿಸಲಾಗುತಿದ್ದು ಆದರೆ ಅಚ್ಚರಿ ಎಂಬಂತೆ ಸುಳ್ಯ ಕ್ಷೇತ್ರದ ಶಾಸಕ ಅಂಗಾರ ಮತ್ತು ಬಿಜೆಪಿ ನಾಯಕರು ಸೇರಿಸಿಕೊಂಡು ಈ ಕಿಟ್ ಗಳನ್ನು ಬಿ.ಜೆಪಿ ಕಿಟ್ ಎಂದು ಬಿಂಬಿಸಲಾಗುತಿದೆ ಎಂದು ಸುಳ್ಯ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪ ಗೌಡ ಗಂಭೀರ ಆರೋಪ ಮಾಡಿದ್ದಾರೆ.
ಯಾರಿಗೂ ತಿಳಿಯದೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಕಿಟ್ಟನ್ನು ಪರವೂರಿಗೆ ಸಾಗಿಸಿ ಅದನ್ನು ಒಂದು ಬಿಜೆಪಿ ಪಕ್ಷದ ವತಿಂದ ನೀಡಿದಂತೆ ಬಿಂಬಿಸಲಾಗುತ್ತಿದೆ .ಈಗ ಇದಕ್ಕೆ ಸಂಬಂಧಿಸಿ ದೇವಳದಲ್ಲಿ ಸುಮಾರು 2500 ಕಿಟ್ ಗಳನ್ನು ತಯಾರಿಸುತ್ತಿರುವ ಮಾಹಿತಿ ನನ್ನ ಗಮನಕ್ಕೆ ಬಂದಿದೆ. ಸಾರ್ವಜನಿಕರ ಶ್ರದ್ದಾ ಕೇಂದ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ನೀಡುವ ಕಿಟ್ ಗಳನ್ನು ಅರ್ಹರಿಗೆ ನೀಡಿದಲ್ಲಿ ಯಾರದ್ದೇ ಆಕ್ಷೇಪಣೆ ಬರಲಾರದು. ಹೊರತು ಒಂದು ಪಕ್ಷದ ಕಡೆಯಿಂದ ನೀಡಿದಂತಾದರೆ ಕಾನುನು ಕ್ರಮಕ್ಕೆ ಸಂಬಂಧಿಸಿದವ್ರು ಒಳಪಡುವುದಿಲ್ಲವೇ ?ಎಂದು ವೆಂಕಪ್ಪ ಗೌಡರು ಹೇಳಿಕೆಯಲ್ಲಿ ತಿಳಿಸಿದ್ದಾರೆ.