- Advertisement -
- Advertisement -
ಮಂಗಳೂರು: ನವರಾತ್ರಿ ಉತ್ಸವದ ಅಂಗವಾಗಿ ಕರಾವಳಿ ಹಾಗೂ ಮಲೆನಾಡಿನ ಪ್ರಸಿದ್ಧ ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಭಕ್ತಾದಿಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಮಂಗಳೂರು ವಿಭಾಗವು 5 ವಿಶೇಷ ‘ದಸರಾ ಏಕದಿನ ಪ್ರವಾಸ ಪ್ಯಾಕೇಜ್’ಗಳನ್ನು ಪ್ರಕಟಿಸಿದೆ.
ಈ ವಿಶೇಷ ಬಸ್‌ಗಳ ಸೇವೆಯು ಅಕ್ಟೋಬರ್ 11 ರಿಂದ 20 ರವರೆಗೆ ಲಭ್ಯವಿರಲಿದೆ.
ವಿಶೇಷ ಪ್ಯಾಕೇಜ್‌ಗಳು ಮತ್ತು ದರ ವಿವರ:
- ಮಂಗಳೂರು ದಸರಾ ‘ನವದುರ್ಗಾ ದರ್ಶನ’ (ಬೆಳಿಗ್ಗೆ 8:00 – ರಾತ್ರಿ 8:30)
- ದರ: ಹಿರಿಯರಿಗೆ ₹500, ಮಕ್ಕಳಿಗೆ ₹400
- ಪ್ರಮುಖ ತಾಣಗಳು: ಮಂಗಳಾದೇವಿ, ಪೊಳಲಿ, ಕಟೀಲು, ಬಪ್ಪನಾಡು, ಕುದ್ರೋಳಿ ಗೋಕರ್ಣನಾಥೇಶ್ವರ ಸೇರಿದಂತೆ 11 ದೇವಾಲಯಗಳು.
- ಮಂಗಳೂರು – ತಲಕಾವೇರಿ – ಭಾಗಮಂಡಲ (ಬೆಳಿಗ್ಗೆ 7:00 – ರಾತ್ರಿ 9:30)
- ದರ: ಹಿರಿಯರಿಗೆ ₹600, ಮಕ್ಕಳಿಗೆ ₹500
- ಪ್ರಮುಖ ತಾಣಗಳು: ಪುತ್ತೂರು ಮಹಾಲಿಂಗೇಶ್ವರ, ತಲಕಾವೇರಿ, ತ್ರಿವೇಣಿ ಸಂಗಮ, ಅಬ್ಬಿ ಜಲಪಾತ, ರಾಜಾಸೀಟ್.
- ಮಂಗಳೂರು – ಕೊಲ್ಲೂರು ಕ್ಷೇತ್ರ ದರ್ಶನ (ಬೆಳಿಗ್ಗೆ 8:00 – ರಾತ್ರಿ 8:00)
- ದರ: ಹಿರಿಯರಿಗೆ ₹600, ಮಕ್ಕಳಿಗೆ ₹500
- ಪ್ರಮುಖ ತಾಣಗಳು: ಉಚ್ಚಿಲ, ಕಾಪು, ಮಂದಾರ್ತಿ, ಕೊಲ್ಲೂರು ಮೂಕಾಂಬಿಕಾ, ಮಾರಣಕಟ್ಟೆ.
- ಮಂಗಳೂರು – ಸಿಗಂಧೂರು ಕ್ಷೇತ್ರ ದರ್ಶನ (ಬೆಳಿಗ್ಗೆ 7:00 – ರಾತ್ರಿ 7:30)
- ದರ: ಹಿರಿಯರಿಗೆ ₹700, ಮಕ್ಕಳಿಗೆ ₹600
- ಪ್ರಮುಖ ತಾಣಗಳು: ಸಿಗಂಧೂರು ಚೌಡೇಶ್ವರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ.
- ಮಂಗಳೂರು – ಶೃಂಗೇರಿ ದಸರಾ ಪ್ಯಾಕೇಜ್ (ಬೆಳಿಗ್ಗೆ 8:00 – ರಾತ್ರಿ 7:30)
- ದರ: ಹಿರಿಯರಿಗೆ ₹600, ಮಕ್ಕಳಿಗೆ ₹500
- ಪ್ರಮುಖ ತಾಣಗಳು: ಕೊಡಿಯಾಡ್ಕ, ಶೃಂಗೇರಿ ಶಾರದಾಂಬೆ ದೇವಸ್ಥಾನ, ಹರಿಹರಪುರ, ಕಿಗ್ಗಾ.
ಬುಕಿಂಗ್ ವಿವರ: ಸಾರ್ವಜನಿಕರು ಅಧಿಕೃತ ವೆಬ್‌ಸೈಟ್ www.ksrtc.in ಮೂಲಕ ಅಥವಾ ಮಂಗಳೂರು ಬಸ್ ನಿಲ್ದಾಣದ ಕೌಂಟರ್‌ನಲ್ಲಿ ಮುಂಗಡ ಸೀಟು ಕಾಯ್ದಿರಿಸಬಹುದು. (ಮಾಹಿತಿಗೆ: 9663211553, 7760990720).
- Advertisement -


