ಹಿರಿಯ ಬಾಲಿವುಡ್ ನಟ ಜಾಕಿಶ್ರಾಫ್ ಪುತ್ರಿ ಕೃಷ್ಣಾ ಶ್ರಾಫ್ ಸದಾ ಮುಖಪುಟದಲ್ಲಿ ಸುದ್ದಿಯಾಗುತ್ತಾರೆ. ವಿಭಿನ್ನ ನಡೆ, ಫಿಟ್ನೆಸ್, ಉತ್ಸಾಹದಲ್ಲಿ ತನ್ನ ಸಹೋದರ ಟೈಗರ್ ಶ್ರಾಫ್ ರನ್ನು ಮೀರಿಸುತ್ತಾರೆ. ಕೃಷ್ಣಾ ತುಂಬಾನೆ ಬೋಲ್ಡ್ ಹುಡುಗಿ.
ಸಾಕಷ್ಟು ಗಾಸಿಪ್, ಫೋಟೋಗಳು ಹೊರ ಬಿದ್ದ ನಂತರವೂ “ದಿಶಾ ಪಠಾಣಿ ತನ್ನ ಆಪ್ತ ಸ್ನೇಹಿತೆಯಷ್ಟೇ ನಾನು ಇನ್ನೂ ಸಿಂಗಲ್” ಎಂದು ಟೈಗರ್ ಶ್ರಾಫ್ ಹೇಳುತ್ತಲೇ ಇದ್ದಾರೆ. ಆದರೆ, ಅವರ ತಂಗಿ ಕೃಷ್ಣಾ ತನ್ನ ಪಾರ್ಟ್ನರ್ ಬಗ್ಗೆ ಮುಜುಗರವಿಲ್ಲದೇ ವಿವರ ನೀಡಿದ್ದಾರೆ.
ಕೃಷ್ಣಾ ತನ್ನ ಬಾಯ್ ಫ್ರೆಂಡ್ ಇಬಾನ್ ಹ್ಯಾಮ್ಸ್ ಜತೆ ಲಿಪ್ ಲಾಕ್ ಮಾಡಿದ ರೊಮ್ಯಾಂಟಿಕ್ ಫೋಟೋಗಳನ್ನು ಇನ್ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿದ್ದು, ಫೋಟೋ ಇಂಟರ್ನೆಟ್ ಜಗತ್ತಿನಲ್ಲಿ ಬಿರುಗಾಳಿಯೆಬ್ಬಿಸಿಬಿಟ್ಟಿವೆ. ಕೃಷ್ಣಾ ಸದ್ಯ ವೃತ್ತಿನಿರತ ಫುಟ್ಬಾಲ್ ಆಟಗಾರ ಇಬಾನ್ ಹ್ಯಾಮ್ಸ್ ಜತೆ ಮುಂಬೈನ ಖ್ಯಾತ ಹ್ಯಾಂಗೌಟ್ ಪ್ರದೇಶದಲ್ಲಿ ಡೇಟಿಂಗ್ ನಲ್ಲಿರುವುದು ಗೊತ್ತಾಗಿದೆ.
ಕೆಲದಿನಗಳ ಹಿಂದಷ್ಟೆ ಕೃಷ್ಣಾ ತಮ್ಮ ಬಿಕಿನಿ ಫೋಟೋದಿಂದ ನೆಟ್ಟಿಗ ಪಡ್ಡೆಗಳ ನಿದ್ದೆಗೆಡಿಸಿದ್ದರು. ಆಕೆಯ ಅವತಾರಕ್ಕೆ ಚಂದದ ಟ್ಯಾಟೂಗಳು ಮೆರಗು ನೀಡಿದ್ದವು. ಫಿಟ್ ನೆಸ್ ಗ್ರೌಂಡ್ ಎಂಎಂಎ- ಮ್ಯಾಟ್ರಿಕ್ಸ್ ನಲ್ಲಿ ನಿರಂತರವಾಗಿ ಜಿಮ್ ಹಾಗೂ ವರ್ಕೌಟ್ ಮಾಡುವುದೇ ಆಕೆಯ ಸೌಂದರ್ಯದ ಗುಟ್ಟು ಎನ್ನಲಾಗಿದೆ.
27 ವರ್ಷದ ಕೃಷ್ಣಾ 2015 ರಲ್ಲಿ ಇನ್ಸ್ಟಾಗ್ರಾಂ ನಲ್ಲಿ ಟಾಪ್ ಲೆಸ್ ಫೋಟೋ ಅಪ್ ಲೋಡ್ ಮಾಡಿ ವಿವಾದ ಸೃಷ್ಟಿಸಿದ್ದರು.