Wednesday, June 3, 2026
Homeಕರಾವಳಿಉಡುಪಿಮಲ್ಪೆಯಲ್ಲಿ ಚಲಿಸುತ್ತಿರುವ ಬೋಟ್ ಗಳಲ್ಲಿ ಕೋಟಿ ಕಂಠ ಗಾಯನ

ಮಲ್ಪೆಯಲ್ಲಿ ಚಲಿಸುತ್ತಿರುವ ಬೋಟ್ ಗಳಲ್ಲಿ ಕೋಟಿ ಕಂಠ ಗಾಯನ

- Advertisement -
- Advertisement -

ಉಡುಪಿ: ಕೋಟಿ ಕಂಠ ಗಾಯನ ಅಭಿಯಾನದ ಹಿನ್ನೆಲೆಯಲ್ಲಿ ಮಲ್ಪೆಯಲ್ಲಿ ಇಂದು ಚಲಿಸುತ್ತಿರುವ ಬೋಟುಗಳಲ್ಲಿ ಕನ್ನಡ ಗೀತೆಗಳನ್ನು ಹಾಡಲಾಯಿತು.

ನೂರಕ್ಕೂ ಅಧಿಕ ಬೋಟುಗಳಲ್ಲಿ ಕನ್ನಡ ಗೀತೆ ಗಾಯನ ನಡೆದಿದ್ದು, ಮಲ್ಪೆ-ಸೈಂಟ್ ಮೇರೀಸ್ ಸಮುದ್ರ ಮಾರ್ಗದಲ್ಲಿ ಸಾವಿರಾರು ಗಾಯಕರಿಂದ ಕನ್ನಡ ಹಾಡುಗಳನ್ನು ಹಾಡಲಾಯಿತು.

ಮೀನುಗಾರಿಕಾ ಬೋಟುಗಳಲ್ಲಿ ಕನ್ನಡ ಬಾವುಟ ಹಿಡಿದು ಮೀನುಗಾರರು ಗಾಯನದಲ್ಲಿ ಪಾಲ್ಗೊಂಡಿದ್ದರು.

ಮಲ್ಪೆ ಬೀಚ್ ಅನ್ನು ಕೂಡಾ ಗಾಯನ ಸ್ಥಳವಾಗಿ ಕನ್ನಡ ‌ಮತ್ತು ಸಂಸ್ಕೃತಿ ಇಲಾಖೆಯಿಂದ ಗುರುತಿಸಲಾಗಿತ್ತು.

- Advertisement -

Latest News

error: Content is protected !!