Wednesday, June 26, 2024
Homeತಾಜಾ ಸುದ್ದಿಮಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹಾಗು ಮಂಜುನಾಥ್ ಭಂಡಾರಿ ...

ಮಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹಾಗು ಮಂಜುನಾಥ್ ಭಂಡಾರಿ ಗೆಲುವು.

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮಂಜುನಾಥ್ ಭಂಡಾರಿ ಜಯಗಳಿಸಿದ್ದಾರೆ.

ಒಟ್ಟು 389 ಮತಗಟ್ಟೆಗಳ 6,011 ಮತಗಳ ಪೈಕಿ, ಬಿಜೆಪಿ ಕೋಟ ಶ್ರೀನಿವಾಸ್ ಪೂಜಾರಿ 3672 ಮತಗಳನ್ನು ಪಡೆದಿದ್ದು, ಕಾಂಗ್ರಸ್ ನ ಮಂಜುನಾಥ್ ಭಂಡಾರಿ 2079 ಮತಗಳನ್ನು ಪಡೆದು ಪ್ರಥಮ ಪ್ರಾಶಸ್ತ್ಯದಲ್ಲಿ ಜಯಗಳಿಸಿದ್ದಾರೆ.

ಇನ್ನು ಎಸ್ ಡಿಪಿಯ ಅಭ್ಯರ್ಥಿ ಶಾಫಿ.ಕೆ 204 ಮತಗಳನ್ನು ಪಡೆದಿದ್ದಾರೆ. 6,011 ಮತಗಳ ಪೈಕಿ 5,955 ಸಿಂಧು ಮತಗಳು ಚಲಾವಣೆ ಆಗಿದೆ. 56 ಅಸಿಂಧು ಮತಗಳಾಗಿವೆ.

ಈ ಗೆಲುವಿನ ಮೂಲಕ ಕೋಟ ಶ್ರೀನಿವಾಸ ಪೂಜಾರಿ ಅವರು ಸತತ ನಾಲ್ಕನೇ ಬಾರಿಗೆ ಪರಿಷತ್‌ ಪ್ರವೇಶ ಮಾಡಿದ್ದಾರೆ.

- Advertisement -
spot_img

Latest News

error: Content is protected !!