Thursday, June 25, 2026
Homeಕರಾವಳಿಕಡಬ: ಬೈಕ್ ಮೇಲೆ‌ ಇರಿಸಿದ ಹೆಲ್ಮೆಟ್ ನಾಪತ್ತೆ: ಕೊರಗಜ್ಜನಿಗೆ‌ ಹರಕೆ‌ ಹೇಳಿದ 10 ದಿನಗಳಲ್ಲೇ ಸಿಕ್ತು...

ಕಡಬ: ಬೈಕ್ ಮೇಲೆ‌ ಇರಿಸಿದ ಹೆಲ್ಮೆಟ್ ನಾಪತ್ತೆ: ಕೊರಗಜ್ಜನಿಗೆ‌ ಹರಕೆ‌ ಹೇಳಿದ 10 ದಿನಗಳಲ್ಲೇ ಸಿಕ್ತು ವಾಪಾಸ್

- Advertisement -
- Advertisement -

ಕಡಬ: ಬೈಕ್ ಮೇಲೆ‌  ಇರಿಸಿದ್ದ ಹೆಲ್ಮೆಟನ್ನು ಕದ್ದೊಯ್ದು  ಬಳಿಕ ಕೊರಗಜ್ಜನಿಗೆ ಹರಕೆ‌‌ ಹೇಳಿದ 10 ದಿನಗಳಲ್ಲಿ ಹೆಲ್ಮೆಟ್ ಅದೇ ಜಾಗದಲ್ಲಿ ಹೆಲ್ಮೆಟ್ ಸಿಕ್ಕಿದ ಘಟನೆ ಕಡಬದಲ್ಲಿ ನಡೆದಿದೆ.

ಕಡಬದ ಪದ್ಮನಾಭ ಎಂಬವರು ತಾನು ಕೆಲಸ ಮಾಡುತ್ತಿದ್ದ ಸ್ಥಳದ ಸಮೀಪ ದ್ವಿ ಚಕ್ರ ವಾಹನ ನಿಲ್ಲಿಸಿದ್ದರು.ಹೀಗಾಗಿ ವಾಹನದ ಮೇಲೆಯೇ ಹೆಲ್ಮೆಟ್  ಕೂಡ ಇಟ್ಟಿದ್ದರು.ಸುಮಾರು ಸಮಯದ ಬಳಿಕ ಹೆಲ್ಮೆಟನ್ನು ಯಾರೋ ಕದ್ದೊಯ್ದಿರುವುದು ಗಮನಕ್ಕೆ ಬಂದಿದೆ.

ಹುಡುಕಾಡಿದರೂ ಸಿಗದ ಕಾರಣ ಹೆಲ್ಮೆಟ್ ಎಗರಿಸಿದವರಿಗೆ ತನ್ನ ತಪ್ಪಿನ ಅರಿವಾಗಲಿ ಎಂಬ ಆಶಯದಲ್ಲಿ ಕೊರಗಜ್ಜ ದೈವಕ್ಕೆ ಕೈ ಪ್ರಾರ್ಥನೆ ಸಲ್ಲಿಸಿ ಹರಿಕೆ ಮಾಡಿಕೊಂಡಿದ್ದರು.ಇದೀಗ ಹತ್ತು ದಿನಗಳ ಬಳಿಕ ಹೆಲ್ಮೆಟ್ ಕಾಣೆಯಾಗಿದ್ದ ಸ್ಥಳದಲ್ಲಿ ಮತ್ತೆ ಪ್ರತ್ಯಕ್ಷವಾಗಿ ಅವರ‌ ಕೈಸೇರಿದೆ. ಕೊರಗಜ್ಜ ನ ಕಾರ್ಣಿಕಕ್ಕೆ ಇದು ಸಾಕ್ಷಿ ಎಂದು‌ ಅವರು ಹೇಳಿದ್ದಾರೆ.

- Advertisement -

Latest News

error: Content is protected !!