Saturday, May 4, 2024
Homeಕರಾವಳಿಮಂಗಳೂರು: ಹಾಡಹಗಲೇ‌ ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಮಂಗಳೂರು: ಹಾಡಹಗಲೇ‌ ಮನೆಗೆ ನುಗ್ಗಿ ಚಿನ್ನಾಭರಣ ಕಳವು

spot_img
- Advertisement -
- Advertisement -

ಮಂಗಳೂರು;  ಹಾಡಹಗಲೇ ಮನೆಗೆ ನುಗ್ಗಿ  ಚಿನ್ನಾಭರಣ ಕದ್ದಿರುವ ಘಟನೆ  ಮಂಗಳೂರಿನ ಬಿಜೈ ನ್ಯೂ ರೋಡ್ ಸಮೀಪದ ಮನೆಯೊಂದರಲ್ಲಜ ನಡೆದಿದೆ.

ಮಂಜುಳಾ ಎಂಬವರು ಬುಧವಾರ ಬೆಳಗ್ಗೆ 10.30ಕ್ಕೆ ಬೀಗ ಹಾಕಿ ಹೊರಗಡೆ ಹೋಗಿದ್ದು, ಮಧ್ಯಾಹ್ನ 12.30ಕ್ಕೆ ವಾಪಸ್ ಆಗಿದ್ದರು.

ಈ ವೇಳೆ ಮನೆಯ  ಎದುರಿನ ಬಾಗಿಲನ್ನು ತೆರೆದು ಒಳಗಡೆ ಹೋದಾಗ ಮನೆಯ ಹಿಂಬದಿಯ ಬಾಗಿಲು ತೆರೆದುಕೊಂಡಿತ್ತು. ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ್ದ ಕಳ್ಳರು ಬೆಡ್‌ರೂಮ್‌ನ ಕಪಾಟಿನ ಲಾಕರ್‌ನಲ್ಲಿದ್ದ 28 ಗ್ರಾಂನ 1 ಬಳೆ, 40 ಗ್ರಾಂ ಮತ್ತು 8 ಗ್ರಾಂನ ಸರಗಳು, 1 ಗ್ರಾಂನ 1 ಜತೆ ಕಿವಿಯೋಲೆ ಸಹಿತ ಸುಮಾರು 4 ಲ.ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!