- Advertisement -
- Advertisement -
ಮಂಗಳೂರು: ಕೆಎಂಸಿ ಮಣಿಪಾಲದ ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು (84) ಅವರು ಮಂಗಳವಾರದಂದು ನಿಧನರಾಗಿದ್ದಾರೆ.
ಕೆಎಂಸಿ ಮಣಿಪಾಲದ ಹೃದ್ರೋಗ ವಿಭಾಗದ ನಿವೃತ್ತ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿದ್ದ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ಅವರು 1970 ರಲ್ಲಿ ಪ್ರತಿಷ್ಠಿತ ಸಿಎಂಸಿ ವೆಲ್ಲೂರ್‌ನಿಂದ ಹೃದ್ರೋಗಶಾಸ್ತ್ರದಲ್ಲಿ ತರಬೇತಿ ಪಡೆದ ಮೊದಲಿಗರಲ್ಲಿ ಒಬ್ಬರಾಗಿದ್ದರು.
ಅವರು ಕೆಎಂಸಿ ಮಣಿಪಾಲದಲ್ಲಿ ಹೃದ್ರೋಗ ವಿಭಾಗ ಮತ್ತು ಡಿಎಂ ಕಾರ್ಡಿಯಾಲಜಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.
ಮೃತರು ಪುತ್ರಿಯರಾದ ಸುಮನ್ ಪ್ರಭು ಮತ್ತು ಡಾ. ಸೌಮಿನಿ ಪಿ. ಕಾಮತ್, ಅಳಿಯಂದಿರಾದ ಡಾ. ರವೀಂದ್ರ ಪ್ರಭು ಮತ್ತು ಡಾ. ಪದ್ಮನಾಭ್ ಕಾಮತ್ ಮತ್ತು ಐವರು ಮೊಮ್ಮಕ್ಕಳನ್ನು ಅಗಲಿದ್ದಾರೆ.
- Advertisement -