Saturday, June 6, 2026
HomeWorldಉದ್ಯಮಿ ಅಂಬಾನಿ ಮಗನ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಖಾನ್ ಗಳ ‘ನಾಟು ನಾಟು’ ಡ್ಯಾನ್ಸ್; ಖಾನ್...

ಉದ್ಯಮಿ ಅಂಬಾನಿ ಮಗನ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಖಾನ್ ಗಳ ‘ನಾಟು ನಾಟು’ ಡ್ಯಾನ್ಸ್; ಖಾನ್ ಗಳು ಪಡೆದ ಸಂಭಾವನೆ ಎಷ್ಟು ಗೊತ್ತಾ?

- Advertisement -
- Advertisement -

ಮುಂಬಯಿ: ಗುಜರಾತಿನ ಜಾಮ್ ನಗರದಲ್ಲಿ ಉದ್ಯಮಿ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಅವರ ವಿವಾಹ ಪೂರ್ವ ಸಮಾರಂಭವು ಅದ್ಧೂರಿಯಾಗಿ ನೆರವೇರಿದೆ. 

ಮೂರು ದಿನಗಳ ಕಾರ್ಯಕ್ರಮಕ್ಕೆ ಕೋಟಿ ಕೋಟಿ ಖರ್ಚು ವೆಚ್ಚಗಳಾಗಿದ್ದು, ಅನಂತ್ – ರಾಧಿಕಾ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ದೇಶ ವಿದೇಶದ ಖ್ಯಾತ ಸೆಲೆಬ್ರಿಟಿಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಪಾಪ್ ಗಾಯಕಿ ರಿಹಾನಾ ಅವರ ಮ್ಯೂಸಿಕಲ್ ನೈಟ್ ಎಲ್ಲರನ್ನು ರಂಜಿಸಿತ್ತು. ಅವರ ಹಾಡಿಗೆ ಬಿಟೌನ್ ಸ್ಟಾರ್ಸ್ ಗಳು ಕೂಡ ಹೆಜ್ಜೆ ಹಾಕಿದ್ದರು. ಅವರು ಭಾರತಕ್ಕೆ ಬಂದು ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್ ನಲ್ಲಿ ಸ್ಟೇಜ್ ಕಾರ್ಯಕ್ರಮ ನೀಡಲು 75 ಕೋಟಿ. ರೂ ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

ಇನ್ನು ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ಮೂವರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಮೂವರನ್ನು ಜೊತೆಯಾಗಿ ಒಂದೇ ವೇದಿಕೆಯಲ್ಲಿ ನಿಲ್ಲಿಸುವುದು ಯಾವ ನಿರ್ಮಾಪಕನಿಗೂ ಕಷ್ಟ ಸಾಧ್ಯದ ಕೆಲಸ ಅಂತಲೇ ಹೇಳಬಹುದು. ಆದರೆ ಅಂಬಾನಿ ಅದನ್ನು ಮಾಡಿ ತೋರಿಸಿದ್ದಾರೆ. ಬಿಟೌನ್ ನ ಮೂವರು ಖಾನ್ ಗಳು ವೇದಿಕೆಯಲ್ಲಿ ‘ನಾಟು ನಾಟು’ ಹಾಡಿಗೆ ಹೆಗಲ ಮೇಲೆ ಕೈಹಾಕಿಕೊಂಡು ಹೆಜ್ಜೆ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂವರು ಜೊತೆಯಾಗಿ ಕಾಣಿಸಿಕೊಂಡು ಹೆಜ್ಜೆ ಹಾಕಲು ಎಷ್ಟು ಸಂಭಾವನೆ ಪಡೆದಿರಬಹುದೆಂದು ಹಲವರಿಗೆ ಪ್ರಶ್ನೆಯೊಂದು ಕಾಡಿತ್ತು.

ಇದೀಗ ಈ ಬಗ್ಗೆ ಒಂದು ಸುದ್ದಿ ಹೊರಬಿದ್ದಿದೆ. ಮೂವರು ಖಾನ್‌ಗಳು ವೇದಿಕೆಯಲ್ಲಿ ತಮ್ಮ ಪ್ರದರ್ಶನಕ್ಕಾಗಿ ಒಂದು ಪೈಸೆಯನ್ನೂ ತೆಗದುಕೊಂಡಿಲ್ಲ. ಅವರು ವೇದಿಕೆಯನ್ನು ಹಂಚಿಕೊಳ್ಳುವ ಮತ್ತು ಅಂಬಾನಿಗಳಿಗೆ ಮನರಂಜನೆ ನೀಡುವುದಕ್ಕೆ ಉತ್ಸುಕರಾಗಿದ್ದರು ಎಂದು ವರದಿ ತಿಳಿಸಿದೆ. ದಿಲ್ವಿತ್ ದೋಸಾಂಜ್, ಶ್ರೇಯಾ ಘೋಷಾಲ್, ಉದಿತ್ ನಾರಾಯಣ್, ಅರಿಜಿತ್ ಸಿಂಗ್, ಎಕಾನ್ ಸೇರಿದಂತೆ ಹಲವರು ವೇದಿಕೆಯಲ್ಲಿ ಕಾರ್ಯಕ್ರಮ ನೀಡಿದ್ದರು.

- Advertisement -

Latest News

error: Content is protected !!