Saturday, May 11, 2024
Homeತಾಜಾ ಸುದ್ದಿಉಳ್ಳಾಲದ ಪ್ರವೇಶ ದ್ವಾರದಲ್ಲೇ ಅತೀ ಎತ್ತರದ ರಾಷ್ಟ್ರಧ್ವಜ ನಿರ್ಮಾಣ:ದೇಶದ್ರೋಹದ ಹೇಳಿಕೆಗೆ ದೇಶ ಪ್ರೇಮದ ಮೂಲಕ ಉತ್ತರ...

ಉಳ್ಳಾಲದ ಪ್ರವೇಶ ದ್ವಾರದಲ್ಲೇ ಅತೀ ಎತ್ತರದ ರಾಷ್ಟ್ರಧ್ವಜ ನಿರ್ಮಾಣ:ದೇಶದ್ರೋಹದ ಹೇಳಿಕೆಗೆ ದೇಶ ಪ್ರೇಮದ ಮೂಲಕ ಉತ್ತರ ಕೊಟ್ಟ ಖಾದರ್

spot_img
- Advertisement -
- Advertisement -

ಮಂಗಳೂರು: ಆರ್‌ ಎಸ್‌ ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌, ಕಲೆದ ಕೆಲ ತಿಂಗಳುಗಳ ಹಿಂದೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಸ್ವ ಕ್ಷೇತ್ರ ಉಳ್ಳಾಲವನ್ನು ‘ಪಾಕಿಸ್ತಾನ’ ಅಂತ ಹೇಳಿದ್ರು. ಈ ಹೇಳಿಕೆಗೆ ತಿರುಗೇಟು ಕೊಡುವಂತೆ ಉಳ್ಳಾಲದ ಪ್ರವೇಶ ದ್ವಾರದಲ್ಲೇ ಅತೀ ಎತ್ತರದ ರಾಷ್ಟ್ರಧ್ವಜ ಹಾರಿಸಿ ಖಾದರ್‌ ಕೌಂಟರ್ ಕೊಟ್ಟಿದ್ದಾರೆ.

ಉಳ್ಳಾಲ ಪ್ರವೇಶಿಸೋ ಹೆಬ್ಬಾಗಿಲಲ್ಲೇ 110 ಅಡಿ ಎತ್ತರದಲ್ಲಿ ದಿನದ 24 ಗಂಟೆ ಹಾರುವ ರಾಷ್ಟ್ರಧ್ವಜ ನಿರ್ಮಿಸಿದ್ದು, ಕರ್ನಾಟಕದಲ್ಲೇ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಹಾರಾಡುವ ಅತೀ ಎತ್ತರದ ರಾಷ್ಟ್ರಧ್ವಜ ಇದಾಗಿದೆ. 110 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ 20 ಫೀಟ್‌ ಎತ್ತರ ಮತ್ತು 30 ಫೀಟ್‌ ಅಗಲದ ರಾಷ್ಟ್ರಧ್ವಜ ಹಾರಾಡಲಿದೆ.‌ ಆಗಸ್ಟ್ 14ರ ಮಧ್ಯರಾತ್ರಿ ಅಧಿಕೃತ ಉದ್ಘಾಟನೆಗೊಳ್ಳಲಿದೆ.

ಹಾಗೇ ತಮ್ಮ ಶಿಕ್ಷಣ ಸಂಸ್ಥೆಯಲ್ಲೂ ಹೀಗೆ ಧ್ವಜ ಹಾರಿಸಿ ದೇಶ ಪ್ರೇಮ ತೋರಿಸಲಿ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಗೂ ಖಾದರ್ ಸವಾಲೆಸೆದಿದ್ದಾರೆ.

- Advertisement -
spot_img

Latest News

error: Content is protected !!