Saturday, June 6, 2026
Homeಕರಾವಳಿಕಡಬ:ಚರ್ಚ್ ಗೋಪುರದ ಶಿಲುಬೆ ಕಿತ್ತು ಕೇಸರಿ ಧ್ವಜ ಹಾರಿಸಿದ ದುಷ್ಕರ್ಮಿಗಳು

ಕಡಬ:ಚರ್ಚ್ ಗೋಪುರದ ಶಿಲುಬೆ ಕಿತ್ತು ಕೇಸರಿ ಧ್ವಜ ಹಾರಿಸಿದ ದುಷ್ಕರ್ಮಿಗಳು

- Advertisement -
- Advertisement -

ಕಡಬ: ಚರ್ಚ್ ನ ಗೋಪುರದ ಶಿಲುಬೆ ಕಿತ್ತೆಸೆದು ದುಷ್ಕರ್ಮಿಗಳು ಕೇಸರಿ ಧ್ವಜ ಹಾರಿಸಿರುವ ಘಟನೆ ಕಡಬದ ಪೇರಡ್ಕ ಸಮೀಪದ ಇಮ್ಯಾನ್ಯೂವೆಲ್ ಎ.ಜಿ ಚರ್ಚ್‌ನಲ್ಲಿ ನಡೆದಿದೆ.

ಧರ್ಮಸ್ಥಳ-ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಮತ್ತು ಕಡಬ ತಾಲೂಕಿಗೆ ಒಳಪಡುವ ಪೇರಡ್ಕದಲ್ಲಿ ಇರುವ ಇಮ್ಯಾನುವೆಲ್ ಎ.ಜಿ ಚರ್ಚ್‌ನಲ್ಲಿ ದುರಸ್ತಿ ಕಾಮಗಾರಿಗಳು ನಡೆಯುತ್ತಿದೆ. ರಾತ್ರಿ ಇಲ್ಲಿಗೆ ಆಗಮಿಸಿರುವ ಕಿಡಿಗೇಡಿಗಳು ಚರ್ಚ್‌ನ ಗೋಪುರದಲ್ಲಿರುವ ಶಿಲುಬೆಯನ್ನು ತೆಗೆದು ಕೇಸರಿ ಧ್ವಜ ಹಾಕಿದ್ದಾರೆ. ಚರ್ಚ್ ಬಾಗಿಲು ಒಡೆದು ಒಳಗಡೆ ಪ್ರವೇಶಿಸಿ ಹನುಮಾನ್ ದೇವರ ಫೋಟೋ ಇಟ್ಟು ದೀಪ ಹಚ್ಚಿರುವ ಘಟನೆ ನಡೆದಿದೆ ಎನ್ನಲಾಗಿದೆ.

ಅಲ್ಲದೇ ಈ ಬಗ್ಗೆ ಮಲೆಯಾಳಂ ಭಾಷೆಯಲಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇನ್ನು ಹನುಮಾನ್ ಫೋಟೋವನ್ನು ಹಾಗೂ ಧ್ವಜವನ್ನು ಸಮಸ್ಯೆಯಾಗೋದು ಬೇಡ ಎಂಬ ಕಾರಣಕ್ಕೆ ಚರ್ಚ್ ನವರೇ ತೆಗೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇದುವರೆಗೂ ದೂರು ದಾಖಲಾಗಿಲ್ಲ.

- Advertisement -

Latest News

error: Content is protected !!