Sunday, June 7, 2026
Homeತಾಜಾ ಸುದ್ದಿಕೇರಳದ ಯುವಕನಿಗೆ ಖುಲಾಯಿಸಿದ ಅದೃಷ್ಟ: ಮಸ್ಕತ್ ನಲ್ಲಿ ಹೊಡೆಯಿತು 39 ಕೋಟಿ ರೂಪಾಯಿ ಲಾಟರಿ

ಕೇರಳದ ಯುವಕನಿಗೆ ಖುಲಾಯಿಸಿದ ಅದೃಷ್ಟ: ಮಸ್ಕತ್ ನಲ್ಲಿ ಹೊಡೆಯಿತು 39 ಕೋಟಿ ರೂಪಾಯಿ ಲಾಟರಿ

- Advertisement -
- Advertisement -

ಕೇರಳ: ಮಸ್ಕತ್​ನಲ್ಲಿ ನೆಲೆಸಿದ್ದ ಕೇರಳ ಮೂಲದ ವ್ಯಕ್ತಿ ಬರೋಬ್ಬರಿ 39 ಕೋಟಿ ರೂಪಾಯಿ ಮೌಲ್ಯದ ತಿಂಗಳ ಲಾಟರಿ ಗೆಲ್ಲುವ ಮೂಲಕ ಏಕಾಏಕಿ ಕೋಟ್ಯಾಧಿಪತಿಯಾಗಿದ್ದಾರೆ.

ಮಸ್ಕತ್​​ನಲ್ಲಿ ಶಾಪಿಂಗ್​ ಸೆಂಟರ್ ನಡೆಸುತ್ತಿರುವ ಅಬ್ದುಸ್ಸಲ್ಲಾಂ ಎನ್​ ವಿ (28) ಈ ವರ್ಷದ ಮೊದಲ ಲಕ್ಕಿ ಡ್ರಾವನ್ನ ತಮ್ಮದಾಗಿಸಿಕೊಂಡಿದ್ದಾರೆ. ಕೊಝಿಕೊಡೆ ನಿವಾಸಿ ಅಬ್ದುಸ್ಸಲಾಂ ಭಾನುವಾರ ಅಬುಧಾನಿ ಲಕ್ಕಿ ಡ್ರಾ ಗೆದ್ದಿದ್ದರೂ ಸಹ ಅವರನ್ನ ಪತ್ತೆ ಹಚ್ಚೋದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಕಾರ್ಯಕ್ರಮ ಸಂಘಟಕರು ಅಬ್ದುಸ್ಸಲಾಂರನ್ನ ಸಂಪರ್ಕಿಸಲು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡಿದ್ರು. ನಂತರು ಅವರ ಸ್ನೇಹಿತರ ನೆರವಿನಿಂದ ಈ ವಿಚಾರವನ್ನ ತಲುಪಿಸಲಾಯ್ತು.

ಡಿಸೆಂಬರ್​ 29ರಂದು ಅಬ್ದುಸ್ಸಲಾಂ 323601 ಸಂಖ್ಯೆಯ ಲಾಟರಿ ಟಿಕೆಟ್​ನ್ನ ಖರೀದಿ ಮಾಡಿದ್ದರು. ಈ ವೇಳೆ ಓಮನ್​ ಮೊಬೈಲ್​ ನಂಬರ್​ ನೀಡುವ ಬದಲು ಭಾರತದ ಮೊಬೈಲ್​ ಸಂಖ್ಯೆಯನ್ನ ನೀಡಿದ್ದರು. ಹೀಗಾಗಿ ಅಬ್ದುಸ್ಸಲಾಂರನ್ನ ಸಂಪರ್ಕ ಮಾಡೋದು ಸಂಘಟಿಕರಿಗೆ ಕಷ್ಟದ ಕೆಲಸವಾಗಿ ಪರಿಣಮಿಸಿತು. ಅಂದ ಹಾಗೆ ಅಬ್ದುಸ್ಸಲ್ಲಾಂ ತನ್ನ ಬಹುಮಾನದ ಮೊತ್ತವನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳೋದಾಗಿ ಹೇಳಿದ್ದಾರೆ.

- Advertisement -

Latest News

error: Content is protected !!